Select Your Language

Notifications

webdunia
webdunia
webdunia
webdunia

ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಕಮಲ್ ಹಾಸನ್ ಸಿನಿಮಾಗೆ ನಿಷೇಧ ಹೇರಬೇಕು: ಜೆಡಿಎಸ್‌

ಥಗ್ ಲೈಫ್ ಸಿನಿಮಾ

Sampriya

ಬೆಂಗಳೂರು , ಗುರುವಾರ, 29 ಮೇ 2025 (17:48 IST)
ಬೆಂಗಳೂರು: ಕನ್ನಡ ಭಾಷೆ ಹುಟ್ಟಿರುವುದು ತಮಿಳಿನಿಂದ ಎಂದು ಹೇಳುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರಕ್ಕೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ನಿಷೇಧ ಹೇರಬೇಕು ಎಂದು ಜೆಡಿಎಸ್‌ ಒತ್ತಾಯ ಮಾಡಿದೆ.

ಜೆಡಿಎಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ನಟ  ಕಮಲ್ ಹಾಸನ್ ಅಭಿನಯದ
“ಥಗ್ ಲೈಫ್”   ಚಿತ್ರಕ್ಕೆ  ರಾಜ್ಯ ಸರ್ಕಾರ ಕರ್ನಾಟಕದಲ್ಲಿ ನಿಷೇಧ ಹೇರಬೇಕು.  


ಕನ್ನಡ ಭಾಷೆ ಉಗಮದ ಬಗ್ಗೆ ಬಾಲಿಶಾ ಹಾಗೂ ಉದ್ಧಟತನದ ಹೇಳಿಕೆ ನೀಡಿರುವ ಭಾಷೆಗೇಡಿಯ ಚಿತ್ರ ಜೂನ್ 5ರಂದು ರಾಜ್ಯದಲ್ಲಿ ಬಿಡಗಡೆಗೆ ಸಿದ್ಧವಾಗಿದೆ.
ಈ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡದೆ ಕಮಲ್ ಹಾಸನ್’ಗೆ ಬುದ್ಧಿ ಕಲಿಸಬೇಕು. ಕನ್ನಡ ನಾಡು, ಕನ್ನಡ ನುಡಿ  ವಿರುದ್ಧವಾಗಿ ಮಾತನಾಡುವವರಿಗೆ ನಾವು ಕನ್ನಡ ಭಾಷೆಯ ಪರವಾಗಿದ್ದೇವೆ ಎಂಬ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ತಲುಪಿಸಬೇಕು.  

ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ನಾವು ಕನ್ನಡಿಗರು ಮತ್ತು ಕನ್ನಡದ ಪರವಾಗಿದ್ದೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಅದನ್ನು ಕೃತಿಯಲ್ಲೂ ಮಾಡಿ ತೋರಿಸಬೇಕು.

ಕನ್ನಡಿಗರು ಸಹಿಷ್ಣುಗಳು. ಅದರೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸಹಿಸುವುದಿಲ್ಲ. ಕನ್ನಡದ ವಿರುದ್ಧ ಲಘುವಾಗಿ ಮಾತನಾಡುವವರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು‌ ಎಂದು ಜನತಾದಳ  ಪಕ್ಷವು ಸರ್ಕಾರವನ್ನು ಆಗ್ರಹಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೆ ದೂರು ಕೊಟ್ರೂ ಕ್ರಮವೇ ತಗೊಳ್ಳಲ್ಲ: ಛಲವಾದಿ ನಾರಾಯಣಸ್ವಾಮಿ ಅಳಲು