Select Your Language

Notifications

webdunia
webdunia
webdunia
webdunia

ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ಡ್ರಾಮಾ: ಜೆಡಿಎಸ್‌

 CM Siddaramaiah, Caste Census Report, JDS Party

Sampriya

ಬೆಂಗಳೂರು , ಸೋಮವಾರ, 14 ಏಪ್ರಿಲ್ 2025 (17:24 IST)
Photo Credit X
ಬೆಂಗಳೂರು: ಒಡೆದು ಅಳುವ ಕುತಂತ್ರ ಬುದ್ಧಿ ಕರ್ನಾಟಕ ಕಾಂಗ್ರೆಸ್  ಪಕ್ಷಕ್ಕೆ ಅಂಟಿಕೊಂಡಿರುವ ರೋಗ. ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ "ಜಾತಿ ಗಣತಿ ವರದಿ"ಯ ಡ್ರಾಮಾ ಶುರು ಮಾಡಿದ್ದಾರೆ ಎಂದು ಜೆಡಿಎಸ್ ಆರೋಪ ಮಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಅಂದು ಭಾರತಕ್ಕೆ ಬಂದು ಬ್ರಿಟಿಷರು ಭಾರತೀಯರನ್ನು ಒಡೆದು ಆಳ್ವಿಕೆ ಮಾಡುತ್ತಿದ್ದರು. ಇಂದು ಇಟಲಿ ಕಾಂಗ್ರೆಸ್ ಪಕ್ಷದ ಗುಲಾಮರು ಅದನ್ನೇ ಮುಂದುವರಿಸಿದ್ದಾರೆ.

ವೈಜ್ಞಾನಿಕವಲ್ಲದ 10 ವರ್ಷಗಳ ಹಿಂದಿನ ಹಳಸಲು, ಕಾಟಾಚಾರದ ಸಮೀಕ್ಷೆಯನ್ನು ಜಾತಿ ಗಣತಿ ವರದಿಯಂದು ಬಿಂಬಿಸಿ, ಸಮುದಾಯಗಳ ಮಧ್ಯೆ "ದ್ವೇಷದ ವಿಷ ಬೀಜ" ಬಿತ್ತಲಾಗುತ್ತಿದೆ.

ರಾಜ್ಯದ ಜನಸಂಖ್ಯೆಗೂ ವರದಿಯ ಅಂಕಿ- ಅಂಶಗಳಿಗೂ ತಾಳಮೇಳವೇ ಇಲ್ಲ. ನನ್ನ ಮನೆಗೆ ಜಾತಿ ಗಣತಿ ಮಾಡುವವರು ಬಂದೇ ಇಲ್ಲ ಎಂದು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್‌ ಅವರೇ ನೀಡಿದ್ದ ಬಹಿರಂಗ ಹೇಳಿಕೆ ಇದಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅಂಡ್‌ ಟೀಂ ಸಿದ್ಧಪಡಿಸಿರುವ ರೆಡಿಮೇಡ್‌ ವರದಿ.

ದಶಕಗಳ ಹಿಂದಿನ ಈ ವರದಿಯಲ್ಲಿ ಹಲವು ನೂನ್ಯತೆಗಳಿವೆ, ಕ್ರಮಬದ್ಧವಾಗಿ ನಡೆದಿಲ್ಲ. ಮತ್ತು ಅಂಕಿ -ಅಂಶಗಳು ಅವಾಸ್ತವಿಕತೆಯಿಂದ ಕೂಡಿದೆ ಎಂದು ಸಂಪುಟದ ಸಚಿವರು ಮತ್ತು ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಪ್ರಾಯೋಚಿತ "ಜಾತಿ ಗಣತಿ ವರದಿ" ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಗೆ ಕಾರಣವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ವೈಫಲ್ಯ ಮುಚ್ಚಿಡಲು ಕೇಂದ್ರದ ವಿರುದ್ಧ ಅಪಪ್ರಚಾರ:ವಿಜಯೇಂದ್ರ