Select Your Language

Notifications

webdunia
webdunia
webdunia
webdunia

ಕನ್ನಡದ ಕಬೀರ ಇಬ್ರಾಹಿಂ ಇನ್ನಿಲ್ಲ

ಕನ್ನಡದ ಕಬೀರ ಇಬ್ರಾಹಿಂ ಇನ್ನಿಲ್ಲ
ಬಾಗಲಕೋಟೆ , ಶನಿವಾರ, 5 ಫೆಬ್ರವರಿ 2022 (09:20 IST)
ಬಾಗಲಕೋಟೆ : ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಇಬ್ರಾಹಿಂ ಸುತಾರ(76) ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಸಾವನ್ನಪ್ಪಿದ್ದಾರೆ.

ಇಬ್ರಾಹಿಂ ಸುತಾರ ಎದೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣಇಬ್ರಾಹಿಂ ಸುತಾರ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

ಕನ್ನಡದ ಕಬೀರ ಎಂದೇ ಹೆಸರಾಗಿದ್ದ ಇಬ್ರಾಹಿಂ ಸುತಾರ್ ಅವರು ಭಾವೈಕ್ಯ ಸಂದೇಶ ಸಾರುವ ಸಂತರಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ, ಶರಣರ ತತ್ವಗಳ ಅಧ್ಯಯನ ಮಾಡಿದವರಗಾಗಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ ಧರ್ಮ ಸಹಿಷ್ಣುತೆ ಪಾಠ ಮಾಡುತ್ತಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೇಯರ್ ಎಲೆಕ್ಷನ್ ಮುಂದೂಡಿಕೆ