Select Your Language

Notifications

webdunia
webdunia
webdunia
Sunday, 13 April 2025
webdunia

ಮೇಯರ್ ಎಲೆಕ್ಷನ್ ಮುಂದೂಡಿಕೆ

ಚುನಾವಣೆ
ಕಲಬುರಗಿ , ಶನಿವಾರ, 5 ಫೆಬ್ರವರಿ 2022 (08:18 IST)
ಕಲಬುರಗಿ : ಇಂದು ನಡೆಯಬೇಕಿದ್ದ ಕಲಬುರಗಿ ಪಾಲಿಕೆ ಮೇಯರ್ ಚುನಾವಣೆಯನ್ನು ಹೈಕೋರ್ಟ್ ಪೀಠ ಮುಂದೂಡಿದೆ.

ಮೇಯರ್ ಚುನಾವಣೆ ಮೀಸಲಾತಿ ಮತ್ತು ಐವರು ಎಂಎಲ್ಸಿಗಳ ಹೆಸರು ಸೇರ್ಪಡೆ ವಿರೋಧಿಸಿದ್ದ ಕಾಂಗ್ರೆಸ್, ಮೇಯರ್ ಚುನಾವಣೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ನ ಕಲಬುರಗಿ ಪೀಠ, ಈ ಹಿಂದಿನ ಮತ ಪಟ್ಟಿ ಅನುಸಾರವೇ ಮೇಯರ್ ಚುನಾವಣೆ ನಡೆಸಲು ಆದೇಶ ನೀಡಿದೆ. 

ಒಮ್ಮೆ ಮತದಾರರ ಪಟ್ಟಿಯನ್ನ ಸಿದ್ಧಪಡಿಸಿದ ಮೇಲೆ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಳೆಯ ಮತಪಟ್ಟಿ ಅನುಸಾರ ಮುಂದಿನ ಒಂದು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್ ನಲ್ಲಿ ಯಾವ ಮಾಸ್ಕ್ ಧರಿಸಬೇಕು?