Select Your Language

Notifications

webdunia
webdunia
webdunia
webdunia

ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನೇರ ಪೈಪೋಟಿ

ಚುನಾವಣೆಯಲ್ಲಿ ಬಿಜೆಪಿ  ಕಾಂಗ್ರೆಸ್ ನೇರ ಪೈಪೋಟಿ
ಪಣಜಿ , ಶನಿವಾರ, 5 ಫೆಬ್ರವರಿ 2022 (07:22 IST)
ಪಣಜಿ : ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ಪ್ರಬಲ ಪೈಪೋಟಿಯಿದೆ.
 
ಬೇರೆ ಯಾವುದೇ ಪಕ್ಷಗಳಿಗಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದರು.

ವರ್ಚುವಲ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಸ್ಪರ್ಧೆಯಿದೆ. ಹೀಗಾಗಿ ಉಳಿದ ಪಕ್ಷಗಳಿಗೆ ನಿಮ್ಮ ಮತಗಳನ್ನು ನೀಡಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಹೇಳಿದರು.

ಕೊರೊನಾ ಸಮಯದಲ್ಲಿ ಕೋವಿಡ್ 19 ನಿರ್ವಹಣೆ, ಜೀವನೋಪಾಯ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಕಿಡಿಕಾರಿದರು. 

ಈ ಬಾರಿ ಪಕ್ಷಾಂತರಿಗೆ ಟೆಕೆಟ್ ನೀಡಿಲ್ಲ, ಬದಲಿಗೆ ಹೊಸಬರಿಗೆ ಅವಕಾಶ ನೀಡಲಾಗಿದೆ. ಇದರಿಂದ ಬಹುಮತದೊಂದಿಗೆ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆಯಲ್ಲಿ ದನಿ ಎತ್ತಿದ ಸುಮಲತಾ?