Publish Date: Tue, 19 Oct 2021 (14:26 IST)
Updated Date: Tue, 19 Oct 2021 (15:22 IST)
ಬೆಂಗಳೂರು : ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಮರಳುವುದು ಬಹುತೇಕ ಖಚಿತವಾಗಿದೆ.
ಈ ಸಂಬಂಧ ಇಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಸಿಂದಗಿಗೆ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಸಿ.ಎಂ.ಇಬ್ರಾಹಿಂ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇಬ್ರಾಹಿಂ ಜೆಡಿಎಸ್ ರಿಟರ್ನ್ ಟಿಕೆಟ್ ಕನ್ಫರ್ಮ್?
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಇಬ್ಬರೂ ನಾಯಕರು ಸುದೀರ್ಘ ಮಾತುಕತೆ ನಡೆಸಿದ್ದು, ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದ ಕುರಿತು ಚರ್ಚೆಗಳು ನಡೆದವು ಎಂದು ತಿಳಿದುಬಂದಿದೆ. ಉಭಯ ನಾಯಕರ ನಡುವಣ ಚರ್ಚೆಯ ಫಲಶ್ರುತಿಯಾಗಿ ಇಬ್ರಾಹಿಂ ಡಿಸೆಂಬರ್‌ನಲ್ಲಿ ಎಆS ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇಬ್ರಾಹಿಂ ಜತೆ ಇನ್ನೂ ಹಲವು ಮುಖಂಡರು ಎಆS ಸೇರಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಅಸೆಂಬ್ಲಿ ಬೈಎಲೆಕ್ಷನ್ ನಡೆದಿರುವಾಗ ಮತ್ತು ಅದರಲ್ಲೂ ಮುಸ್ಲಿಂ ಸಮುದಾಯದ ಓಲೈಕೆ ನಡೆದಿರುವಾಗ, ಇಬ್ಬರೂ ನಾಯಕರ ಭೇಟಿ ಕುತೂಹಲಕಾರಿಯಾಗಿದೆ.