Select Your Language

Notifications

webdunia
webdunia
webdunia
webdunia

ಹಿಂದೂಗಳು ಮುಂದೆ ಬಾರದ ಜನ, ಬೇರೆಯವರನ್ನೂ ಮುಂದೆ ಬರಲು ಬಿಡಲ್ಲ: ಭಗವಾನ್ ವಿವಾದ

K S Bhagawan

Krishnaveni K

ಮೈಸೂರು , ಸೋಮವಾರ, 30 ಸೆಪ್ಟಂಬರ್ 2024 (10:04 IST)
ಮೈಸೂರು: ಪ್ರಗತಿಪರ ಚಿಂತಕ, ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಮತ್ತೆ ಹಿಂದೂ ಧರ್ಮದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದೂಗಳು ಮುಂದೆ ಬಾರದ ಜನ, ಬೇರೆಯವರನ್ನೂ ಮುಂದೆ ಬರಲು ಬಿಡಲ್ಲ ಎಂದು ಭಗವಾನ್ ಅವಹೇಳನ ಮಾಡಿದ್ದಾರೆ.

ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಮಂಡಲೋತ್ಸವದಲ್ಲಿ ಭಾಗಿಯಾದ ಭಗವಾನ್, ಹಿಂದೂಗಳು ಮುಂದೆ ಬಾರದ ಜನ, ಬೇರೆಯವರನ್ನೂ ಮುಂದೆ ಬರಲು ಬಿಡಲ್ಲ. ಹಿಂದೂ ಧರ್ಮ ಎಂಬುದು ಅದು ಹಿಂದೂಗಳ ಧರ್ಮವಲ್ಲ. ಅದು ಬ್ರಾಹ್ಮಣರ ಧರ್ಮ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರು ಬ್ರಾಹ್ಮಣ ಎನ್ನಲ್ಲ. ಅವರನ್ನು ಶೂದ್ರರು ಎನ್ನುತ್ತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ಆದರೆ ಅದರೊಳಗಿರುವುದು ಬ್ರಾಹ್ಮಣರು. ತಟ್ಟೆಗೆ ಕಾಸು ಹಾಕ್ತೀರಿ, ಕಾಯಿ ಕೊಟ್ಟರೆ ಅರ್ಧ ಒಡೆದು ನಿಮಗೆ ಕೊಡ್ತಾರೆ. ಶೂದ್ರರಿಗೆ ನಿಜವಾಗಿಯೂ ಮಾನ, ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು’ ಎಂದು ಭಗವಾನ್ ಹೇಳಿದ್ದಾರೆ.

ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇವಲ ಭಗವಾನ್ ಮಾತ್ರವಲ್ಲ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಪ್ರಗತಿಪರ ಚಿಂತಕರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಹಿಂದೂ ಧರ್ಮ, ದೇವರ ಬಗ್ಗೆ ವಾಚಮಗೋಚರವಾಗಿ ಮಾತನಾಡಿದ್ದಾರೆ. ಜ್ಞಾನ ಪ್ರಕಾಶ ಸ್ವಾಮೀಜಿ ಹಿಂದೂ ದೇವರಾದ ಗಣೇಶ, ಹನುಮಂತನನ್ನು ವ್ಯಂಗ್ಯ ಮಾಡಿದ್ದಾರೆ. ನಿಮಗೂ ಅಂತಹ ಮಕ್ಕಳು ಹುಟ್ಟಲಿ ನೋಡೋಣ. ಅವರನ್ನು ವಾಕಿಂಗ್ ಕರ್ಕೊಂಡು ಬನ್ನಿ ಎಂದೆಲ್ಲಾ ಲೇವಡಿ ಮಾಡಿದ್ದಾರೆ. ಇನ್ನೊಂದೆಡೆ ಇತಿಹಾಸ ತಜ್ಞ ವಿ. ನಂಜರಾಜ ಅರಸ್ ಮಹಿಷ ನಿಜವಾಗಿಯೂ ಜೀವಂತವಾಗಿ ಇದ್ದ. ಆದರೆ ಚಾಮುಂಡಿ ತಾಯಿ ಎಂಬುದು ಕಾಲ್ಪನಿಕ ಕಥಾ ಪಾತ್ರ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಗೆ ಹಂದಿ ಎಂದಿಲ್ಲ, ಇಂಗ್ಲಿಷ್ ನಲ್ಲಿ ಹೇಳಿದ್ರು: ಎಡಿಜಿಪಿ ಚಂದ್ರಶೇಖರ್ ಪರ ಸಿದ್ದರಾಮಯ್ಯ ಬ್ಯಾಟಿಂಗ್