Select Your Language

Notifications

webdunia
webdunia
webdunia
webdunia

ಪತ್ನಿ ಶ್ರಾವಣಿ ಮೇಲೆ ಸಮೀರ್ ಆಚಾರ್ಯ ಹಲ್ಲೆ ಕೇಸ್: ಜಸ್ಟಿಸ್ ಫಾರ್ ಸಂಯುಕ್ತಾ ಹೆಗಡೆ ಎಂದಿದ್ಯಾಕೆ ನೆಟ್ಟಿಗರು

Sameer Acharya-Shravani

Krishnaveni K

ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2024 (09:35 IST)
Photo Credit: Instagram
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಮಾತಾಗಿದ್ದ ಸಮೀರ್ ಆಚಾರ್ಯ ತಮ್ಮ ತಂದೆ-ತಾಯಿ ಜೊತೆ ಸೇರಿಕೊಂಡು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
 

ಸಮೀರ್ ಆಚಾರ್ಯ ಮತ್ತು ಪತ್ನಿ ಶ್ರಾವಣಿ ತಮ್ಮ ಮಗಳ ಜೊತೆಗೆ ಆಗಾಗ ಟೂರ್ ಹೋಗುವ ವಿಡಿಯೋಗಳನ್ನು ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ಇಬ್ಬರೂ ಹೊರ ಜಗತ್ತಿಗೆ ಅನ್ಯೋನ್ಯವಾಗಿಯೇ ಕಾಣಿಸಿಕೊಂಡಿದ್ದರು. ಆದರೆ ಈಗ ಇಬ್ಬರ ನಡುವೆ ಮನಸ್ತಾಪದ ಸುದ್ದಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಭಾನುವಾರ ಮನೆ ಕೆಲಸ ಮಾಡುತ್ತಿದ್ದಾಗ ಮಗಳು ಅಳುತ್ತಿದ್ದಳು ಎಂದು ಶ್ರಾವಣಿ ಮಗಳಿಗೆ ಬೈದಿದ್ದಾರೆ. ಇದನ್ನು ನೋಡಿ ಸಮೀರ್ ಆಚಾರ್ಯ ತಂದೆ ಸೊಸೆ ಶ್ರಾವಣಿಗೆ ಗದರಿದ್ದಾರೆ. ಇದೇ ವಿಚಾರಕ್ಕೆ ಮಾವ-ಸೊಸೆ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸಮೀರ್ ಆಚಾರ್ಯ ತಮ್ಮ ತಂದೆ-ತಾಯಿ ಜೊತೆ ಸೇರಿಕೊಂಡು ಶ್ರಾವಣಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಶ್ರಾವಣಿ ಮೊಬೈಲ್ ತೆಗೆದುಕೊಂಡು ಇನ್ ಸ್ಟಾಗ್ರಾಂ ಲೈವ್ ಹೋಗಿದ್ದಾರೆ. ಈ ವೇಳೆ ಸಿಟ್ಟಾದ ಸಮೀರ್ ಆಚಾರ್ಯ ಲೈವ್ ನಲ್ಲೇ ಶ್ರಾವಣಿ ಮೊಬೈಲ್ ಒಡೆದು ಹಾಕಿದ್ದಾರೆ.

ಹಲ್ಲೆಯಿಂದ ಶ್ರಾವಣಿ ಮುಖ, ಕೈಗೆ ಗಾಯವಾಗಿದೆ. ಈ ಸಂಬಂಧ ಅವರು ಮಹಿಳಾ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಸಮೀರ್ ಆಚಾರ್ಯ ತಂದೆಯ ತಲೆಗೂ ಗಾಯವಾಗಿದೆ ಎನ್ನಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೇ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಸಮೀರ್ ಆಚಾರ್ಯ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ನಟಿ ಸಂಯುಕ್ತಾ ಹೆಗಡೆ ಕಪಾಳಕ್ಕೆ ಹೊಡೆದಿದ್ದರು. ಆ ವೇಳೆ ಸಂಯುಕ್ತಾ ವಿರುದ್ಧ ಸಮೀರ್ ಪತ್ನಿ ಶ್ರಾವಣಿಯೇ ಮಾಧ್ಯಮಗಳ ಮುಂದೆ ಬಂದು ಕಿಡಿ ಕಾರಿದ್ದರು. ಇದೀಗ ಸಮೀರ್ ತಮ್ಮ ಪತ್ನಿ ಮೇಲೆಯೇ ಹಲ್ಲೆ ಮಾಡಿರುವ ಘಟನೆ ವರದಿಯಾಗುತ್ತಿದ್ದಂತೇ ನೆಟ್ಟಿಗರು ಸಂಯುಕ್ತಾಗೆ ಈಗ ನ್ಯಾಯ ಕೊಡಿಸಿ ಎಂದು ಕಾಲೆಳೆದಿದ್ದಾರೆ.

ಕೆಲವು ದಿನಗಳ ಮೊದಲು ಇದೇ ಸಮೀರ್ ಆಚಾರ್ಯ, ದರ್ಶನ್ ಪರವಾಗಿ ಮಾತನಾಡಿದ್ದರು. ಅದನ್ನಿಟ್ಟುಕೊಂಡು, ಅಂದು ದರ್ಶನ್ ಪರವಾಗಿ ಮಾತನಾಡಿದಾಗಲೇ ಈ ವ್ಯಕ್ತಿ ಬಗ್ಗೆ ನಮಗೆ ಅನುಮಾನ ಶುರುವಾಗಿತ್ತು ಎಂದಿದ್ದಾರೆ. ಇನ್ನು, ಕೆಲವರು ಈ ಹಿಂದೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪತ್ನಿ ಸರಿ ಉತ್ತರ ನೀಡಿದ್ದರೂ ಅವರ ಲೈವ್ ನಲ್ಲೇ ಗದರಿ ತಪ್ಪು ಉತ್ತರ ನೀಡಿದ್ದ ಘಟನೆಯನ್ನು ನೆನೆಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್, ಪವಿತ್ರಾ ಗೌಡ ಪಾಲಿಗೆ ಇಂದು ಗುಡ್ ನ್ಯೂಸ್ ಸಿಗಬಹುದಾ