Select Your Language

Notifications

webdunia
webdunia
webdunia
webdunia

ಸೆರೆಮನೆಯಲ್ಲಿ ಶತದಿನ ಪೂರ್ಣ, ನಾಳೆ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

Actor Darshan Thoogudeep

Sampriya

ಬಳ್ಳಾರಿ , ಭಾನುವಾರ, 29 ಸೆಪ್ಟಂಬರ್ 2024 (11:37 IST)
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಸೇರಿ ಇಂದಿಗೆ 100ದಿನವಾಗಿದೆ. ಹೊರಗಡೆ ಐಷರಾಮಿ ಜೀವನ ಮಾಡುತ್ತಿದ್ದ ದಾಸ ದರ್ಶನ್ ಇಂದು ಬಳ್ಳಾರಿ ಜೈಲಿನಲ್ಲಿ ದಿನದೂಡಲು ಕಷ್ಟಪಡುತ್ತಿದ್ದಾರೆ. ಅದಲ್ಲದೆ ಜೈಲು ಊಟಕ್ಕೆ ಅಡ್ಜೆಸ್ಟ್ ಆಗಲು ಕಷ್ಟಪಡುತ್ತಿರುವ ದರ್ಶನ್ ಸಾಕಷ್ಟು ತೂಕ ಕಳೆದುಕೊಂಡಿದ್ದಾರೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಅವರು ಜೂ.22ರಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅಲ್ಲಿ 68 ದಿನ ಕಾಲ ಕಳೆದ ದರ್ಶನ್ ನಂತರ  ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಕಳೆದ 32 ದಿನದಿಂದ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಬಂಧಿಯಾಗಿದ್ದಾರೆ.

ಈಗಾಗಲೇ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ 3991 ಪುಟಗಳ ಜಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ದರ್ಶನ್ ಅವರ ಪರ ವಕೀಲರು ಎರಡು ಬಾರಿ ಜಾಮೀನು ಕೋರಿ  ಸಲ್ಲಿಸಿದ್ದ  ಅರ್ಜಿ ಮುಂದೂಡಿಕೆ ಮಾಡಲಾಗಿದೆ. ನಾಳೆ ಮತ್ತೇ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಜೈಲಾ, ಬೇಲಾ ಎಂದು ಭವಿಷ್ಯ ನಿರ್ಧಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ತೂರ್ ಸಂತೋಷ್‌ ಹೋಲುವ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟ ಈ ವ್ಯಕ್ತಿ ಯಾರು