Publish Date: Tue, 31 Jan 2023 (21:06 IST)
Updated Date: Tue, 31 Jan 2023 (21:10 IST)
ಹಾಸನ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಅಂತ ಹಟಕ್ಕೆ ಬಿದಿದ್ದ ಭವಾನಿ ರೇವಣ್ಣ H.D. ರೇವಣ್ಣ ಮಧ್ಯಸ್ಥಿತೆ ವಹಿಸಿದ ಬಳಿಕ ಮೌನವಾಗಿದ್ದಾರೆ. ಏತನ್ಮಧ್ಯೆ, ಹಾಸನ ಕ್ಷೇತ್ರದಿಂದ JDS ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾದ ಸ್ವರೂಪ್ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸ್ವರೂಪ್ ಭೇಟಿ ನೀಡಿ, ಮತದಾರರ ಮನದಾಳ ಅರಿಯಲು ಮುಂದಾಗಿದ್ದಾರೆ. ಸ್ವರೂಪ್ ಸಮ್ಮುಖದಲ್ಲಿ BJP ಮುಖಂಡರು JDS ಪಕ್ಷ ಸೇರಿದ್ದಾರೆ. ಇನ್ನು ದೊಡ್ಡಗೌಡರ ಸೊಸೆ ಭವಾನಿ ರೇವಣ್ಣ ಮೌನವಹಿಸಿದ್ದಾರೆ.