Select Your Language

Notifications

webdunia
webdunia
webdunia
webdunia

ಮುಸ್ಲಿಂ ಮುಖಂಡರಿಗೆ ಜೆಡಿಎಸ್ ಶಾಸಕ ಎಸ್ ಟಿ ಸೋಮಶೇಖರ್ ಆವಾಜ್

JDS MLA ST Somashekhar is a voice for Muslim leaders
bangalore , ಗುರುವಾರ, 23 ಮಾರ್ಚ್ 2023 (20:10 IST)
ಯಶವಂತಪುರ ಕ್ಷೇತ್ರದ ಪ್ರಚಾರದ ವೇಳೆ ಸಚಿವ ಎಸ್ ಟಿ ಸೋಮಶೇಖರ್ ಧಮ್ಕಿ ಹಾಕಿದ ಆರೋಪ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಗುಡುಗಿದ್ದಾರೆ.ಜೆಡಿಎಸ್ ಮುಸ್ಲಿಂ ಕಾರ್ಯಕರ್ತರಿಗೆ ಸಚಿವ ಸೋಮಶೇಖರ್ ಧಮ್ಕಿ ಹಾಕಿ ಮಾಜಿ  ಜವರಾಯಿಗೌಡ ವಿರುದ್ಧವೂ ನಿನ್ನೆ ಸೋಮಶೇಖರ್ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ. ಕೆಂಗೇರಿಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸೋಮಶೇಖರ್  ಜೆಡಿಎಸ್ ನ ಮುಸ್ಲಿಂ ಕಾರ್ಯಕರ್ತರಿಗೆ ಧಮ್ಕಿ ಹಾಕಿದ  ವಿಡಿಯೋ ಬಿಡುಗಡೆಯನ್ನ ಕುದ್ದು ಜವರಾಯಿಗೌಡ ಇಂದು ಜೆಪಿ ಭವನದಲ್ಲಿ ಸುದ್ದಿಗೋಷ್ಠಿನಡೆಸಿ ಬಿಡುಗಡೆ ಮಾಡಿದ್ರು. ಸಚಿವರಿಗೆ ನಾನು ಅಭ್ಯರ್ಥಿ ಅಂತ ಘೋಷಣೆ ಆಗೋವರೆಗೂ ಭಯ ಇರ್ಲಿಲ್ಲ. ಇವಾಗ ಭಯ ಬಂದಿದೆ ಅದಕ್ಕೆ ಈ ರೀತಿ ಕಾರ್ಯಕರ್ತರ ಮೇಲೆ ಧಮ್ಕಿ ಹಾಕ್ತಿದ್ದಾರೆ. ಕಾಂಗ್ರೆಸ್ ನವರು ನನ್ನ ಕರೆದ್ರು ನಾನು ಪಕ್ಷಕ್ಕೆ ದೇವಗೌಡರಿಗೆ ದ್ರೋಹ ಮಾಡಿ ಹೋಗಬಾರದು ಅಂತ ಇಲ್ಲೇ ಇರೋದಾಗಿ ಇದೇ ವೇಳೆ ಸ್ಪಷ್ಟಪಡಿಸಿದ್ರು.
 
ಇದೆ ವೇಳೆ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಜವರಾಯಿಗೌಡ ಮತದಾರರಿಗೆ ಕುಕ್ಕರ್. ದಿನಸಿ ಕಿಟ್ ಜೊತೆಗೆ, ಪ್ರತಿಯೊಬ್ಬ ಭೂತ್ ಮುಖಂಡ ಹಾಗೂ ಪಂಚಾಯ್ತಿ ಸದಸ್ಯನಿಗೆ ಹಣದ ಹೊಳೆ ಹರಿಸುತ್ತಿದ್ದಾರೆ.‌ಇದಕ್ಕೆಲ್ಲೆ ಕಣ್ಣೋಟ ಲೆಕ್ಕದಲ್ಲೇ ಕೋಟಿ ಕೋಟಿ ಹಣ ವ್ಯಯ ಆಗಿದೆ ಇದಕ್ಕೆಲ್ಲ ಹಣ ಎಲ್ಲಿಂಸ ಬಂತು. ನಾನು ಮೂರು ಎಂಎಲ್ ಎ. ಎರಡು ಎಂಪಿ.‌ಜಿಲ್ಲಾಪಂಚಾಯ್ತಿ ಪಂಚಾಯತಿ ಚುನಾವಣೆ ಮಾಡಿದ್ದೇನೆ ಒಂದು ರೂಪಾಯಿ ಅಕ್ರಮ ಮಾಡಿಲ್ಲ ಮನೆ ದುಡ್ಡನ್ನ ಖರ್ಚು ಮಾಡಿದ್ದೇನೆ.‌ ಅವ್ರು ಮನೆ ದುಡ್ಡು ಖರ್ಚು ಮಾಡಿದ್ರೆ ಪ್ರಮಾಣ ಮಾಡ್ಲಿ ಅಂತ ಸಾವಾಲಾಕಿದ್ರು‌.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಪಾಳ್ಯದಿಂದ ರಾಜಭವನ ಚಲೋ