Publish Date: Thu, 23 Mar 2023 (18:55 IST)
Updated Date: Thu, 23 Mar 2023 (19:06 IST)
ಕಳೆದ ಬಾರಿ 2018ರ ವಿಧಾನಸಬೆ ಚುನಾವಣೆಯಲ್ಲಿ BJPಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. JDS ಮತ್ತು ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ರು. ಮಾಜಿ ಸಿಎಂ H.D. ಕುಮಾರಸ್ವಾಮಿ ಸಿಎಂ ಆಗಿದ್ರು. ಆದರೆ BJP ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಡೈನಮೇಟ್ ನೀಡುವ ಕಾರ್ಯ ಮಾಡಿತ್ತು. ಇದೀಗ 2023ರ ವಿಧಾನಸಭೆ ಚುನಾವಣೆ ಬಂದಿದ್ದು, ಕಾಂಗ್ರೆಸ್ ರಿವರ್ಸ್ ಆಪರೇಷನ್ಗೆ ಮುಂದಾಗಿದೆ. BJP ಎಮ್ಎಲ್ಸಿ ಬಾಬುರಾವ್ ಚಿಂಚನಸೂರ್ BJPಗೆ ಗುಡ್ಬೈ ಹೇಳಿದ್ದು, ಕಾಂಗ್ರೆಸ್ ಸೇರ್ಪಡೆಗೊಂಡ್ರು. ಈ ಬೆಳವಣಿಗೆ ಬೆನ್ನಲ್ಲೇ ಕಲಬುರಗಿ ಜಿಲ್ಲೆಯ BJP ಮುಖಂಡರು ಕೈ ಹಿಡಿಯುವ ಸಾಧ್ಯತೆ ಹೆಚ್ಚಿದೆ.. ಖರ್ಗೆ ವಿರುದ್ದ ಅಸಮಾಧಾನಗೊಂಡೇ ಕಾಂಗ್ರೆಸ್ ತೊರೆದಿದ್ದ ಮುಖಂಡರಾದ ಸಂಸದಉಮೇಶ್ ಜಾಧವ್, ಅಫಜಲಪೂರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಹಾಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಯಾಪೂರೆ ಜೊತೆಗೂ ಕಾಂಗ್ರೆಸ್ ಸಂಪರ್ಕ ಹೊಂದಿದೆ ಎನ್ನಲಾಗಿದೆ. ತಮ್ಮನ್ನು ನನ್ನ ವಿರುದ್ದ ಸ್ವ ಪಕ್ಷಿಯರೇ ಎತ್ತಿಕಟ್ಟುತ್ತಿದ್ದಾರೆ ಎಂದು ಅಸಮಾಧಾನಗೊಂಡಿರುವ ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಾರಿ ಸುನಿಲ್ ವಲ್ಯಾಪೂರೆ ಬಿಜೆಪಿಯಿಂದ ಚಿತ್ತಾಪೂರ ಕ್ಷೇತ್ರದಲ್ಲಿ ಸ್ಪರ್ದೆಗೆ ಯತ್ನಿಸುತ್ತಿದ್ದಾರೆ. ಆದರೆ ಸುನೀಲ್ ವಲ್ಯಾಪೂರೆಗೆ ಚಿಂಚೋಳಿ ಟಿಕೆಟ್ ಕೊಡುವುದಾಗಿ ಕಾಂಗ್ರೆಸ್ ಭರವಸೆ ಕೊಡಲಾಗಿದೆ ಎನ್ನಲಾಗಿದೆ. ಆ ಮೂಲಕ ಚಿತ್ತಾಪೂರದಲ್ಲಿ ಪ್ರೀಯಾಂಕ್ ಖರ್ಗೆ ಗೆಲುವು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಪ್ಲ್ಯಾನ್ ಕಾಂಗ್ರೆಸ್ದ್ದಾಗಿದೆ ಎನ್ನಲಾಗಿದೆ.