Publish Date: Thu, 23 Mar 2023 (18:49 IST)
Updated Date: Thu, 23 Mar 2023 (19:08 IST)
ವಿಜಯಪುರದಲ್ಲಿ ಮಾಜಿ ಸಚಿವ S.K. ಬೆಳ್ಳುಬ್ಬಿ ಮತ್ತೆ ಶಾಸಕರಾಗಲೆಂದು ಅಭಿಮಾನಿಗಳು ಕೆಂಡ ಹಾಯ್ದಿದ್ದಾರೆ.ವಿಜಯಪುರ ಜಿಲ್ಲೆಯ ಕೊಲ್ಹಾರದ ರಾಚೋಟೇಶ್ವರ ಮತ್ತು ಗರಸಂಗಿ ವೀರಭದ್ರೇಶ್ವರ ಜಾತ್ರೋತ್ಸವಗಳಲ್ಲಿ ಅಭಿಮಾನಿಗಳು ಕೆಂಡ ಹಾಯ್ದಿದ್ದಾರೆ. ಮಾಜಿ ಸಚಿವ S.K. ಬೆಳ್ಳುಬ್ಬಿ ಭಾವಚಿತ್ರ ಹೊತ್ತು ಅಭಿಮಾನಿಗಳು ಅಗ್ನಿಪ್ರವೇಶ ಮಾಡಿದ್ದಾರೆ.ಅಭಿಮಾನಿಗಳಾದ ಸುಭಾಶ್ ಭಜಂತ್ರಿ, ಅಕ್ಷಯ್ ಬಿಜ್ಜರಗಿ, ಪ್ರವೀಣ ಬೀಳಗಿ ಮತ್ತು ಮಹೇಶ ಅವರಿಂದ ಕೆಂಡಹಾಯಲಾಗಿದೆ. ಬೆಳ್ಳುಬ್ಬಿ ಮತ್ತೆ ಚುನಾಯಿತರಾಗಿ ಸಚಿವರಾಗಲೆಂದು ಸಂಕಲ್ಪಿಸಿ ಅಭಿಮಾನಿಗಳು ಬೆಂಕಿ ಹಾಯ್ದಿದ್ದಾರೆ