Publish Date: Mon, 24 Apr 2023 (20:30 IST)
Updated Date: Mon, 24 Apr 2023 (20:19 IST)
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಜೆಡಿಎಸ್ ನಾಯಕ ಕರೆ ಕೊಟ್ಟಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಪರ ಮತಹಾಕುವಂತೆ ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಆಪ್ತರಾಗಿರುವ ಭೋಜೇಗೌಡ ಕರೆ ನೀಡಿದ್ದಾರೆ.. ಚಿಕ್ಕಮಗಳೂರು ಕ್ಷೇತ್ರದಲ್ಲಿ ತಿಮ್ಮಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಭೋಜೇಗೌಡ ತಿಮ್ಮಶೆಟ್ಟಿಗೆ ಸಾಥ್ ನೀಡುವ ಬದಲು ಕಾಂಗ್ರೆಸ್ ಅಭ್ಯರ್ಥಿ H.D. ತಮ್ಮಯ್ಯ ಪರ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. ಭೋಜೇಗೌಡರು ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.