Publish Date: Mon, 28 May 2018 (14:56 IST)
Updated Date: Mon, 28 May 2018 (14:57 IST)
ಬಿಜೆಪಿ ನೀಡಿದ್ದ ಬಂದ್ ಕರೆಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡದಂತೆ ಮನವೊಲಿಸುತ್ತಿರುವ ಘಟನೆಗಳು ವರದಿಯಾಗಿವೆ.
ರೈತರ ಸಾಲಮನ್ನಾಗೆ ಆಗ್ರಹಿಸಿ ಕರೆಯಲಾಗಿದ್ದ ಬಂದ್‌ಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಗುಲಾಬಿ ನೀಡಿ ಧೈರ್ಯ ಹೇಳುತ್ತಿರುವುದು ಕಂಡು ಬಂದಿದೆ.
ರಾಜ್ಯದ ಬಹತೇಕ ಜಿಲ್ಲೆಗಳಲ್ಲಿ ಬಿಜೆಪಿ ನೀಡಿದ್ದ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಬಂದ್‌ಗೆ ಹೆದರದೆ ಧೈರ್ಯವಾಗಿ ವ್ಯಾಪಾರ ನಡೆಸಿ ಎಂದು ಜೆಡಿಎಸ್ ಕಾರ್ಯಕರ್ತರು ವ್ಯಾಪಾರಸ್ಥರಿಗೆ ಬೆಂಬಲ ನೀಡಿದ್ದಾರೆ.
ಜೆಡಿಎಸ್ ವಿದ್ಯಾರ್ಥಿ ಘಟಕದಿಂದಲೂ ಸಾಥ್ ನೀಡಿದ್ದು, ಬಂದ್ ವಿರೋಧಿಸಿ ಗುಲಾಬಿ ದಿನ ಆಚರಣೆ ಮಾಡುತ್ತಿರೋ ವಿದ್ಯಾರ್ಥಿ ಘಟಕ.ಅಗ್ರಹಾರದ ಸುತ್ತಮುತ್ತ ಅಂಗಡಿಗಳಿಗೆ ಗುಲಾಬಿ ಹೂ ನೀಡಿ ಬಂದ್‌ಗೆ ವಿರೋಧ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.