Publish Date: Mon, 28 May 2018 (09:16 IST)
Updated Date: Mon, 28 May 2018 (09:19 IST)
ಬೆಂಗಳೂರು: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಇಂದು ರಾಜ್ಯದಾದ್ಯಂತ ಬಂದ್ ಗೆ ಕರೆ ನೀಡಿರುವ ಬಿಜೆಪಿಗೆ ಬೆಂಬಲ ಸಿಗದೇ ಸೊರಗಿದೆ.
ಇಂದು ಶಾಲಾ, ಕಾಲೇಜುಗಳ ಪುನರಾರಂಭದ ದಿನ. ಹೀಗಾಗಿ ಬಂದ್ ಸುದ್ದಿ ಕೇಳಿ ಶಿಕ್ಷಣ ಸಂಸ್ಥೆಗಳು, ಪೋಷಕರು ಆತಂಕಗೊಂಡಿದ್ದರು. ಆದರೆ ಬೇರೆ ಬೇರೆ ಸಂಘಟನೆಗಳಿಂದ ಬಂದ್ ಗೆ ಪ್ರತಿಕ್ರಿಯೆ ಬಾರದ ಕಾರಣ ಬಂದ್ ಠುಸ್ ಪಟಾಕಿ ಆಗಿದೆ.
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಕನ್ನಡ ಸಿನಿಮಾ ಕ್ಷೇತ್ರ ಅಥವಾ ಇನ್ಯಾವುದೇ ರೈತ ಸಂಘಟನೆಗಳೊಂದಿಗೆ ಚರ್ಚಿಸದೇ ಬಿಜೆಪಿ ಏಕಪಕ್ಷೀಯವಾಗಿ ಬಂದ್ ಗೆ ಕರೆ ಕೊಟ್ಟಿದ್ದರಿಂದ ಈ ಸಂಘಟನೆಗಳು ಬಂದ್ ನಿಂದ ದೂರವುಳಿಯಲು ನಿರ್ಧರಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.