Publish Date: Mon, 28 May 2018 (12:03 IST)
Updated Date: Mon, 28 May 2018 (12:04 IST)
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ತಯಾರಿ ನಡೆಸುವಾಗ ನೀವೇ ಸಿಎಂ ಆಗಿ ಎಂದು ಕಾಂಗ್ರೆಸ್ ನವರಿಗೆ ಹೇಳಿದ್ದೆವು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಸಂಪುಟ ರಚನೆ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ದೇವೇಗೌಡ ‘ನೀವೇ ಸಿಎಂ ಆಗಿ ಎಂದು ಕಾಂಗ್ರೆಸ್ ನವರಿಗೆ ಹೇಳಿದ್ದೆವು. ಆದರೆ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಸಿಎಂ ಆಗಲಿ ಎಂದಿದ್ದರು’ ಎಂದಿದ್ದಾರೆ.
ಇನ್ನು ರೈತರ ಸಾಲಮನ್ನಾ ವಿಚಾರವಾಗಿ ಕೇವಲ 38 ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ಮಾತ್ರ ಹೇಗೆ ತೀರ್ಮಾನ ಮಾಡಲು ಸಾಧ್ಯ? ಬಹುಮತ ಸಿಕ್ಕಿದ್ದರೆ ನಾವೇ ತೀರ್ಮಾನ ಮಾಡುತ್ತಿದ್ದೆವು. ಇದನ್ನೇ ಕುಮಾರಸ್ವಾಮಿಯೂ ಹೇಳಿದ್ದಾರೆ ಎಂದು ದೇವೇಗೌಡರು ಪುತ್ರನ ಪರ ಬ್ಯಾಟಿಂಗ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.