Publish Date: Mon, 28 May 2018 (12:11 IST)
Updated Date: Mon, 28 May 2018 (12:13 IST)
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಇಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಸಭೆ ನಡೆದಿದೆ.
ಆದರೆ ಹಣಕಾಸು, ನೀರಾವರಿ ಮುಂತಾದ ಪ್ರಮುಖ ಖಾತೆಗಾಗಿ ಎರಡೂ ಪಕ್ಷಗಳ ನಾಯಕರು ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸಂಪುಟ ರಚನೆ ಬಿಕ್ಕಟ್ಟು ಇನ್ನೂ ಬಗೆ ಹರಿದಿಲ್ಲ.
ಅತ್ತ ಕಾಂಗ್ರೆಸ್ ಧುರೀಣರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ. ಅಮೆರಿಕಾಕ್ಕೆ ತೆರಳುವ ಮುನ್ನ ರಾಹುಲ್ ರಾಜ್ಯ ಸಚಿವ ಸಂಪುಟ ವಿಸ್ತರಣೆ ಜವಾಬ್ಧಾರಿಯನ್ನು ಗುಲಾಂ ನಬಿ ಆಜಾದ್ ಗೆ ವಹಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮುಖ ಖಾತೆ ತಮಗೆ ಸಿಗಬೇಕೆಂದು ಎರಡೂ ಪಕ್ಷಗಳು ಆಗ್ರಹಿಸುತ್ತಿದ್ದು, ಯಾವುದೂ ಅಂತಿಮವಾಗುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.