Publish Date: Sun, 05 Mar 2023 (18:36 IST)
Updated Date: Sun, 05 Mar 2023 (18:40 IST)
ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ಜೆ.ಡಿ.ಎಸ್ ಬೃಹತ್ ಪ್ರತಿಜ್ಞಾ ಸಮಾವೇಶವನ್ನು ಬೆಂಗಳೂರಿನ ಶ್ರೀಗಂಧದ ಕಾವಲ್ನ ಒಕ್ಕಲಿಗರ ಸಂಘದ ಫ್ರೌಡಶಾಲೆಯ ಆವರಣದಲ್ಲಿ ನಡೆಸಲಾಯಿತು. ನಾಗಮಂಗಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುರೇಶ್ ಗೌಡ ನೇತ್ರತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಾಗಿಯಾಗಿ ಮಾತನಾಡಿದ್ರು, ನಾಗಮಂಗಲ ಕ್ಷೇತ್ರದಿಂದ ಬಂದು ಇಲ್ಲಿ ಜೀವನ ನಡೆಸುತ್ತಿದ್ದೀರಿ,ಇಲ್ಲಿ ನಿಮಗಾಗಿ ಒಂದು ಸಭೆಯನ್ನ ಆಯೋಜನೆ ಮಾಡಿದ್ದಾರೆ, ದೇವೇಗೌಡರ ಪರವಾಗಿ ನಾನು ಇಲ್ಲಿಗೆ ಆಗಮಿಸಿದ್ದೇನೆ ಹೆಚ್.ಡಿ.ದೇವೇಗೌಡರಿಗೆ ರಾಜಕೀಯ ಜೀವನ ಕೊಟ್ಟಿದ್ದು ನಾಗಮಂಗಲ. ಇಲ್ಲಿನ ಜನ ದೇವೇಗೌಡರಿಗೆ ನೋವು ಕೊಡಲ್ಲ ಅಂತಾ ಗೊತ್ತಿದೆ. ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ನಾನು ರಾಜಕೀಯಕ್ಕೆ ಬಂದ ಮೇಲೆ ಬೇರೆ ವ್ಯವಹಾರಗಳನ್ನು ಬದಿಗಿಟ್ಟೆ. ನಾನು ಸಿಎಂ ಆಗಿದ್ದಾಗ ಜನರಿಗೆ ಸಿಗ್ತಿಲ್ಲ ಅಂತಾ ಅಪಪ್ರಚಾರ ಮಾಡಿದ್ದರು ಎಂದರು. ಸಮಾವೇಶದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಸಾವಿರಾರು ಬೆಂಗಳೂರು ನಿವಾಸಿಗಳು ಭಾಗಿಯಾಗಿದ್ರು.