Publish Date: Mon, 10 Jul 2023 (08:31 IST)
Updated Date: Mon, 10 Jul 2023 (09:09 IST)
ಚಿಕ್ಕೋಡಿ : ಆಪ್ತರಿಂದ ಹತ್ಯೆಗೀಡಾಗಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಸಂಸ್ಕಾರ ಜೈನ ಧರ್ಮದ ಸಂಪ್ರದಾಯದಂತೆ ಭಾನುವಾರ (ಇಂದು) ಹಿರೇಕೋಡಿಯ ನಂದಿಪರ್ವತದ ಆಶ್ರಮದ ಬಳಿ ನೆರವೇರಿತು.
ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರನ ಪುತ್ರ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಚಿತೆಗೆ ಹಾಲು, ಬೆಲ್ಲ, ಕೊಬ್ಬರಿ, ಕರ್ಪೂರ, ಗಂಧದ ಕಟ್ಟಿಗೆ, ಬಾದಾಮಿ, ತುಪ್ಪವನ್ನು ಎರೆಯಲಾಯಿತು. ಈ ವೇಳೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ವಾಮೀಜಿ ಹತ್ಯೆ ಖಂಡಿಸಿ ಸೋಮವಾರ ಮೌನ ಪ್ರತಿಭಟನೆಗೆ ಜೈನ ಸಮುದಾಯ ಮುಂದಾಗಿದೆ. ಸ್ವಾಮೀಜಿಯವರ ಸಾವಿಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ವಾಮೀಜಿಯವರ ಹತ್ಯೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
Ramya kosira
Publish Date: Mon, 10 Jul 2023 (08:31 IST)
Updated Date: Mon, 10 Jul 2023 (09:09 IST)