Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಟಾ ವೈರಸ್ ಪತ್ತೆ!

webdunia
ಶನಿವಾರ, 7 ಆಗಸ್ಟ್ 2021 (08:46 IST)
ಮಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಅಬ್ಬರದ ಭೀತಿ ಎದುರಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗದ ಎಂಟು ಜಿಲ್ಲೆಗಳಲ್ಲಿ ಕೊರೋನಾ ಮಹಾಮಾರಿಯ ಭೀತಿ ಹೆಚ್ಚಾಗಿರೋದ್ರಿಂದ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಗಡಿ ಭಾಗದ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ವಿಸ್ತರಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಇದರ ನಡುವೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ಮತ್ತೊಂದು ರೂಪದಲ್ಲಿ ಡೆಡ್ಲಿ ವೈರಸ್ ಎಂಟ್ರಿ ಕೊಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಟಾ ಹೆಸರಿನ ಹೊಸ ತಳಿಯ ವೈರಾಣು ಪತ್ತೆಯಾಗಿದೆ. ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಸ್ವ್ಯಾಬ್ ಅನ್ನು ಜಿನೋಮಿಕ್ ಸಿಕ್ವೆನ್ಸ್ ಪರೀಕ್ಷೆಗೆ ಒಳಪಡಿಸಿದಾಗ ಇದು ಇಟಾ ತಳಿಯ ವೈರಸ್ ಎಂದು ಖಚಿತವಾಗಿದೆ. ವಿದೇಶವೊಂದರಿಂದ ಬಂದಿದ್ದ ಈ ವ್ಯಕ್ತಿಯಲ್ಲಿ ‘ಇಟಾ’ – B.1.525 ಎಂಬ ವೈರಸ್ ಇರುವುದು ಗೊತ್ತಾಗಿದೆ.
ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೊಸದಾದ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ಕತಾರ್ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವರಲ್ಲಿ ಈ ಇಟಾ ರೂಪಾಂತರಿ ವೈರಸ್ ಇತ್ತು ಎಂದು ಇದೀಗ ಅಧ್ಯಯನ ಸಂದರ್ಭ ಗೊತ್ತಾಗಿದೆ. ವಿದೇಶದಿಂದ ಬಂದ ಮೂಡಬಿದ್ರೆಯ ವ್ಯಕ್ತಿಯೋರ್ವರನ್ನು ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಆದ್ರೆ ಯಾವುದೇ ರೋಗ ಲಕ್ಷಣ ಇಲ್ಲದಿದ್ರು ಪಾಸಿಟಿವ್ ಬಂದಿತ್ತು. ಆ ಬಳಿಕ ಸ್ವ್ಯಾಬ್ನ್ನು ಜಿನೋಮಿಕ್ ಸ್ಟಡಿಗಾಗಿ ಬೆಂಗಳೂರು ವೈರಲಾಜಿ ಲ್ಯಾಬ್ಗೆ ಕಳುಹಿಸಿಕೊಡಲಾಗಿತ್ತು. ಇದೀಗ ಲ್ಯಾಬ್ ವರದಿ ಬಂದಿದ್ದು, ಆ ವರದಿಯಲ್ಲಿ ಇಟಾ ವೈರಸ್ ಇರುವುದು ಗೊತ್ತಾಗಿದೆ.
ಜಿನೋಮಿಕ್ ಸ್ಟಡಿಗಾಗಿ ರ್ಯಾಂಡಮ್ ಆಗಿ ಸ್ವ್ಯಾಬ್ ಕಳುಹಿಸಿಕೊಡಲಾಗುತ್ತೆ. ಈ ರೀತಿ ಕೊಟ್ಟ ಸ್ವ್ಯಾಬ್ನಲ್ಲಿ ಇಟಾ ವೈರಸ್ ರಿಸಲ್ಟ್ ಬಂದಿದೆ. ವ್ಯಕ್ತಿಗೆ ಪಾಸಿಟಿವ್ ಬಂದಾಗಲೇ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 152 ಪ್ರಾಥಮಿಕ ಸಂಪರ್ಕಿತರನ್ನು ಟೆಸ್ಟ್ಗೆ ಒಳಪಡಿಸಲಾಗಿತ್ತು. ಆದ್ರೆ ಯಾರಿಗೂ ಪಾಸಿಟಿವ್ ಬಂದಿರಲಿಲ್ಲ. ಪಾಸಿಟಿವ್ ಬಂದಿದ್ದ ವ್ಯಕ್ತಿಯ ಆರೋಗ್ಯದಲ್ಲೂ ಏರುಪೇರು ಆಗಿರಲಿಲ್ಲ. ಹೀಗಾಗಿ ಈ ರೂಪಾಂತರಿ ತಳಿಯ ಬಗ್ಗೆ ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ. ಇಟಾ ವೈರಸ್ ಇದ್ದ ವ್ಯಕ್ತಿ ಸದ್ಯ ಆರೋಗ್ಯವಾಗಿದ್ದು ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದರಿಂದ ಜನ ಆತಂಕದಲ್ಲಿದ್ದರು. ಆದ್ರೆ ಈ ಬಗ್ಗೆ ಭಯ ಪಡುವ ಬದಲು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ. ಇದರ ನಡುವೆ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಹೇರಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಜನಸಂಚಾರ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ ಈ ಬೀಚ್ಗೆ ಸದ್ಯಕ್ಕಿಲ್ಲ ಎಂಟ್ರಿ!