Select Your Language

Notifications

webdunia
webdunia
webdunia
webdunia

ಮಂಗಳೂರಿನ ಈ ಬೀಚ್ಗೆ ಸದ್ಯಕ್ಕಿಲ್ಲ ಎಂಟ್ರಿ!

ಮಂಗಳೂರಿನ ಈ ಬೀಚ್ಗೆ ಸದ್ಯಕ್ಕಿಲ್ಲ ಎಂಟ್ರಿ!
ಬೆಂಗಳೂರು , ಶನಿವಾರ, 7 ಆಗಸ್ಟ್ 2021 (08:36 IST)
ಕರಾವಳಿಯಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದೆ.. ಮಳೆಯ ಹನಿ ಇಳೆಗೆ ಬಿದ್ದಾಗ, ಇಳೆಯಲ್ಲಾಗುವ ಪುಳಕ, ಮಳೆ ನೀರಿನಿಂದ ಸೃಷ್ಟಿಯಾಗುವ ಜಲಪಾತ, ಭೋರ್ಗರೆಯುವ ನದಿ, ಕಡಲತಟದ ಬಿರುಸಾದ ಗಾಳಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು... ಈ ಎಲ್ಲಾ ದೃಶ್ಯ ವೈಭೋಗ ಒಂದೇ ಪ್ರದೇಶದಲ್ಲಿ ಕಾಣ ಸಿಗಬೇಕಾದರೆ ನೀವು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಬೇಕು.


ಆದರೆ ನೀವೇನಾದ್ರೂ ಕಡಲನಗರಿ ಮಂಗಳೂರಿಗೆ ಟೂರ್ ಪ್ಲ್ಯಾನ್ ಹಾಕಿದ್ರೆ, ನಿಮ್ಮ ಆ  ಪ್ಲ್ಯಾನ್ ನ್ನು ಸ್ವಲ್ಪ ಮುಂದೂಡಿ. ಯಾಕೆಂದರೆ ಕಡಲ ಅಲೆಗಳ ಜೊತೆಗೆ  ಆಟವಾಡುವ ನಿಮ್ಮ ಆಸೆಗೆ ಜಿಲ್ಲಾಡಳಿತ ತಣ್ಣೀರು ಎರಚಿದೆ. ಜನರು ಸಮುದ್ರಕ್ಕೆ ಇಳಿಬಾರದು ಅಂತ ಜಿಲ್ಲಾಡಳಿತ ಸಮುದ್ರಕ್ಕೆ ಬೇಲಿ ಹಾಕಿ ಬಂದ್ ಮಾಡಿದೆ.
ಎಚ್ಚರಿಕೆ ಬೋರ್ಡ್, ಎಚ್ಚರಿಸುವ ಹೋಮ್ ಗಾರ್ಡ್ ಅಪ್ಪಿ ತಪ್ಪಿ ಸಮುದ್ರ ಇಳಿದ್ರೆ ಬೀಳುತ್ತೆ ದೊಡ್ಡ ಮೊತ್ತದ ದಂಡ.  ಇದು ಮಂಗಳೂರಿನ ಪಣಂಬೂರು ಕಡಲ ಕಿನಾರೆಯ ಸದ್ಯದ ಸ್ಥಿತಿ. ಹೌದು, ಮಂಗಳೂರಿಗೆ ಬರ್ಬೇಕು, ಕುಡ್ಲದ ನೀಲ ಸಮುದ್ರ ನೋಡಬೇಕು,  ಬಿಳ್ನೊರೆಯ ಅಲೆಗಳ ಜೊತೆಗೆ ಆಟವಾಡಬೇಕು, ವಿಹಂಗಮ ನೋಟ ಸವಿಯಬೇಕು ಅಂತ ನೀವೇನಾದ್ರೂ ಮಂಗಳೂರಿಗೆ ಟ್ರಿಪ್ ಪ್ಲ್ಯಾನ್ ಹಾಕಿದ್ರೆ, ಸೆಪ್ಟೆಂಬರ್ 15 ವರೆಗೆ ನಿಮ್ಮ ಪ್ಲ್ಯಾನ್ ಮುಂದೂಡಿ.
ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಅಲೆಗಳ ಅಬ್ಬರ ಕೂಡ ಜೋರಾಗಿದೆ. ಅರಬ್ಬೀ ಸಮುದ್ರ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಆದರೆ ಇದರ ನಡುವೆಯೂ ಪ್ರವಾಸಿಗರು ಕಡಲಿಗೆ ಇಳಿಯುತ್ತಿದ್ದಾರೆ. ಪೊಲೀಸರ ಎಚ್ಚರಿಕೆಯ ನಡುವೆಯೂ ಜನ ಸಮುದ್ರಕ್ಕೆ ಇಳಿದು ಅಪಾಯವನ್ನು ತಂದೊಡ್ಡುತ್ತಿದ್ದಾರೆ..
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ, ಸಮುದ್ರ ದಡದಲ್ಲಿ ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ಬೋರ್ಡ್ ಹಾಕಿದೆ. ಸೂಚನೆ ಹೊರತಾಗಿಯೂ ಸಮುದ್ರಕ್ಕೆ ಇಳಿದ್ರೆ 500 ರೂ ಡಂಡ ವಿಧಿಸೋದಾಗಿ ಎಚ್ಚರಿಸಿದೆ.. ಈ ಆದೇಶ ಸೆಪ್ಟೆಂಬರ್ 15 ವರೆಗೂ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ಈ ಏಕಾಏಕಿ ಆದೇಶದ ಬಗ್ಗೆ ಪ್ರವಾಸಿಗರು ಬೇಸರಗೊಂಡಿದ್ದಾರೆ. ಸಮುದ್ರದ ಅಲೆಗಳ ಜೊತೆಗೆ ಆಟ ಮಾಡಬೇಕು ಅಂತ ದೂರದಿಂದ ಬಾಡಿಗೆ ವಾಹನ ಮಾಡ್ಕೊಂಡು ಬಂದ ಸಾವಿರಾರು ಪ್ರವಾಸಿಗರು  ಸಮುದ್ರದ ಅಲೆಗಳ ಜೊತೆಗೆ ಆಟವಾಡಲು, ಆಗದೇ ದೂರದಿಂದಲೇ ನೋಡಿಕೊಂಡು ದಡದಲ್ಲೇ ಆಟವಾಡುತ್ತಿದ್ದಾರೆ.
ಒಟ್ಟಿನಲ್ಲಿ, ನೀವೇನಾದ್ರೂ ಇನ್ನು ಒಂದು ತಿಂಗಳು ಕರಾವಳಿ ಪ್ರವಾಸದ ಯೋಚನೆ ಹಾಕಿದ್ರೆ ಸದ್ಯಕ್ಕೆ ಕೈ ಬಿಡೋದೆ ಬೆಸ್ಟ್, ಯಾಕೆಂದರೆ ಅತ್ತ ಧರ್ಮಸ್ಥಳ ಮುಂತಾದ ತೀರ್ಥ ಕ್ಷೇತ್ರಗಳಲ್ಲೂ ಕೊರೋನಾ ಕಾರಣದಿಂದ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ ಇದೆ. ದೇವಸ್ಥಾನಕ್ಕೆ ಬರಲೇಬೇಕು ಅಂತಿದ್ರೆ ಕೇವಲ ದೇವರ ದರ್ಶನ ಮಾತ್ರ ಮಾಡಬಹುದು. ಸೇವೆಗಳನ್ನು ಮಾಡುವಂತಿಲ್ಲ. ಹರಕೆಯನ್ನು ಒಪ್ಪಿಸುವಂತಿಲ್ಲ. ಒಂದೆಡೆ ಧಾರ್ಮಿಕ ಕ್ಷೇತ್ರಗಳ ಸ್ಥಿತಿ  ಈ ರೀತಿಯಾದ್ರೆ , ಇತ್ತ ಸಮುದ್ರಕ್ಕೂ ಇಳಿಯೋಕೂ ಬಿಡೋದಿಲ್ಲ. ಹೀಗಾಗಿ ನೀವೇನಾದ್ರೂ ಬಂದ್ರೂ ಬಂದ ದಾರಿಗೆ ಸುಂಕ ಇಲ್ಲ ಎನ್ನುವ ಪರಿಸ್ಥಿತಿ ನಿಮ್ಮದಾಗಬಹುದು.. ಯಾವುದಕ್ಕೂ ಒಮ್ಮೆ ಯೋಚನೆ ಮಾಡಿ...


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮುಂದುವರೆದ ಮಳೆ