Publish Date: Fri, 04 Jan 2019 (15:15 IST)
Updated Date: Fri, 04 Jan 2019 (15:17 IST)
ಚಲನಚಿತ್ರ ನಿರ್ಮಾಪಕ ಮನೋಹರ್ ಮನೆ ಹಾಗೂ ಕಛೇರಿ ಮೇಲೆ ಐಟಿ ರೈಡ್ ನಡೆದಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಬೆಳಗ್ಗೆ ಒಂದು ವಾಹನದಲ್ಲಿ ಬಂದ ಅಧಿಕಾರಿಗಳ ತಂಡವು, ಕೆಲ ಸಮಯದ ಬಳಿಕ ಮತ್ತೊಂದು ಇನ್ನೋವಾ ಕಾರಿನಲ್ಲಿ ಇಬ್ಬರು ಐಟಿ ಅಧಿಕಾರಿಗಳು ಆಗಮಿಸಿದರು.
ಕಾರಿನಲ್ಲಿ ಬಂದ ಇಬ್ಬರು ಐಟಿ ಅಧಿಕಾರಿಗಳು ಮನೋಹರ್ ನಿವಾಸದೊಳಗೆ ತೆರಳಿದರು.
ಮನೆಯ ಹೊರಗೆ ಕಾಫಿ ಕುಡಿಯುತ್ತ ಬಂದ ಸಿ. ಆರ್. ಮನೋಹರ್, ಮನೆಯ ಗೇಟ್ ಬಳಿ ಕಾಫಿ ಕುಡಿಯುತ್ತ ನಿಂತಿದ್ದರು. ಆಗ ಮಾಧ್ಯಮದವರ ಕ್ಯಾಮೆರಾ ಕಂಡ ಕೂಡಲೇ ಒಳಗೆ ಮನೋಹರ್ ನಡೆದುಹೋದರು.