Select Your Language

Notifications

webdunia
webdunia
webdunia
webdunia

ಪುನೀತ್ ಮನೆಯಲ್ಲಿ 9 ಗಂಟೆಯಿಂದ ಅಧಿಕಾರಿಗಳು ಮೊಕ್ಕಾಂ: ರಾಧಿಕಾ ಪಂಡಿತ್ ನಿವಾಸದ ಮೇಲೂ ದಾಳಿ

ಐಟಿ ದಾಳಿ
ಬೆಂಗಳೂರು: ಇಂದು ಬೆಳಿಗ್ಗೆಯಿಂದಲೇ ಸ್ಯಾಂಡಲ್ ವುಡ್ ನ ಪ್ರಮುಖ ಸ್ಟಾರ್ ಗಳ ಮನೆಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಇನ್ನೂ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಬೆಳಿಗ್ಗೆಯಿಂದಲೂ ಮೊಕ್ಕಾಂ ಹೂಡಿರುವ ಸತತ 9 ಗಂಟೆಯಿಂದ ತಪಾಸಣೆ ನಡೆಸುತ್ತಿದ್ದರೆ, ಅತ್ತ ಸುದೀಪ್ ಮನೆಯಲ್ಲೂ 8 ಗಂಟೆಯಿಂದ ತಪಾಸಣೆ ನಡೆಸುತ್ತಿದ್ದಾರೆ. ಬೆಳಿಗ್ಗೆ ಮೈಸೂರಿನಲ್ಲಿ ಪೈಲ್ವಾನ್ ಶೂಟಿಂಗ್ ನಲ್ಲಿದ್ದ ಸುದೀಪ್ ಐಟಿ ಅಧಿಕಾರಿಗಳ ತಪಾಸಣೆ ವಿಚಾರ ತಿಳಿಯುತ್ತಿದ್ದ ಮನೆಗೆ ಆಗಮಿಸಿದ್ದಾರೆ.

ಇನ್ನು, ರಾಕಿಂಗ್ ಸ್ಟಾರ್ ಯಶ್ ಮನೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಇದೀಗ ಗಾಯತ್ರಿ ನಗರದಲ್ಲಿರುವ ರಾಧಿಕಾ ಪಂಡಿತ್ ಮನೆಗೂ ದಾಳಿ ಮಾಡಿದ್ದಾರೆ. ಇಲ್ಲಿಯೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಯಶ್ ಯಶೋಮಾರ್ಗದ ದಾಖಲೆಗಳನ್ನೂ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಯಶ್ ಮನೆಯಲ್ಲಿಲ್ಲ, ಅವರು ಮನೆಗೆ ಬಂದ ಮೇಲೆ ಮತ್ತಷ್ಟು ತನಿಖೆ ನಡೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ತಾರೆಯರಿಗೆ ಐಟಿ ಶಾಕ್: ಪುನೀತ್, ಶಿವಣ್ಣ, ಯಶ್ ಮನೆ ಮೇಲೆ ದಾಳಿ