Publish Date: Thu, 03 Jan 2019 (15:38 IST)
Updated Date: Thu, 03 Jan 2019 (15:43 IST)
ಬೆಂಗಳೂರು: ಬೆಳಿಗ್ಗೆಯಿಂದಲೇ ದಾಳಿ ನಡೆಸಿ ಆದಾಯ ದಾಖಲೆ ನಡೆಸುತ್ತಿರುವ ತೆರಿಗೆ ಇಲಾಖೆ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಮನೆಗೆ ಚಿನ್ನ ಮಾಪನ ಮಾಡುವ ಸಾಧನ ತಂದು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿ ನಡುವೆ ಹೊರಗಡೆ ಹೋದ ಕೆಲವು ಸಿಬ್ಬಂದಿಗಳು ಚಿನ್ನ ಮಾಪನ ಮಾಡುವ ಸಾಧನದ ಜತೆಗೆ ವಾಪಸಾಗಿದ್ದಾರೆ. ಬಹುಶಃ ಯಶ್ ಮನೆಯಲ್ಲಿ ದೊರಕಿದ ಚಿನ್ನಾಭರಣಗಳ ಮಾಪನ ಮಾಡುವ ಉದ್ದೇಶ ಅಧಿಕಾರಿಗಳಿಗಿರಬಹುದು.
ಈ ನಡುವೆ ನಟ ಯಶ್, ಅಲ್ಲದೆ ಅವರ ತಂದೆ,ತಾಯಿ, ಪತ್ನಿ ರಾಧಿಕಾ ಪಂಡಿತ್, ಅತ್ತೆ-ಮಾವನ ಹೆಸರಿನಲ್ಲಿರುವ ಆಸ್ತಿ ಪಾಸ್ತಿಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ