Select Your Language

Notifications

webdunia
webdunia
webdunia
webdunia

ಪಕ್ಷಕ್ಕೆ ಅನುಕೂಲವಾಗುವಂಗೆ ಸಚಿವರಿಗೆ ಜವಾಬ್ದಾರಿ..!

ಪಕ್ಷಕ್ಕೆ ಅನುಕೂಲವಾಗುವಂಗೆ ಸಚಿವರಿಗೆ ಜವಾಬ್ದಾರಿ..!
bangalore , ಶನಿವಾರ, 10 ಜೂನ್ 2023 (17:28 IST)
ಪೂರ್ಣ ಪ್ರಮಾಣದ ಸಂಪುಟ ರಚನೆಯ ನಂತರ ಉಸ್ತುವಾರಿಗಳ ನೇಮಕಕ್ಕೆ ಬೇಡಿಕೆ ಹೆಚ್ಚಾಗಿತ್ತು..ಇದೀಗ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕಗೊಳಿಸಿ ಸಿಎಂ ಆದೇಶ ಹೊರಡಿಸಿದ್ದಾರೆ..ಕೆಲವರಿಗೆ ಅವರದೇ ಜಿಲ್ಲೆಯನ್ನ ನೀಡಿದ್ದಾರೆ..ಇನ್ನು ಕೆಲವು ಕಡೆ ಪಕ್ಷಕ್ಕೆ ಅನುಕೂಲ ಆಗುವಂತೆ ಸಚಿವರನ್ನ ನೇಮಕಗೊಳಿಸಲಾಗಿದೆ.ಪೂರ್ಣ ಪ್ರಮಾಣದ ಸಂಪುಟ ರಚನೆಯಾದ್ರೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿರ್ಲಿಲ್ಲ..ಪ್ರಸ್ತುತ ಮಳೆಗಾಲ ಬೇರೆ ಶುರುವಾಗಿದ್ದು ಉಸ್ತುವಾರಿ ನೇಮಕ ಮಾಡುವಂತೆ ಬೇಡಿಕೆ ಹೆಚ್ಚಿತ್ತು..ಕೆಲವರು ತಮಗೆ ತಮ್ಮದೇ ಜಿಲ್ಲೆ ನೀಡಬೇಕೆಂದು ಸಿಎಂ ಮೇಲೆ ಒತ್ತಡ ತಂದಿದ್ದರು..ಇದೀಗ ಅಳೆದು ತೂಗಿ ನೋಡಿ ಪಕ್ಷಕ್ಕೆ ಅನುಕೂಲವಾಗುವಂತೆ,ಲೋಕಸಭೆ ಚುನಾವಣೆಯಲ್ಲಿ ಲಾಭವಾಗುವಂತೆ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿಯನ್ನ ನೀಡಲಾಗಿದೆ.

ಯಾರಿಗೆಲ್ಲಾ ತವರು ಜಿಲ್ಲೆಯ ಉಸ್ತುವಾರಿ ಸಿಕ್ಕಿದೆ..?
ಡಾ.ಜಿ.ಪರಮೇಶ್ವರ್- ತುಮಕೂರು
ಹೆಚ್.ಕೆ.ಪಾಟೀಲ್-ಗದಗ
ಸತೀಶ್ ಜಾರಕಿಹೊಳಿ- ಬೆಳಗಾವಿ
ಎಂ.ಬಿ.ಪಾಟೀಲ್- ವಿಜಯಪುರ
ಹೆಚ್.ಸಿ.ಮಹದೇವಪ್ಪ- ಮೈಸೂರು
ಈಶ್ವರ್ ಖಂಡ್ರೆ- ಬೀದರ್
ಪ್ರಿಯಾಂಕ್ ಖರ್ಗೆ- ಕಲಬುರಗಿ
ಆರ್.ಬಿ.ತಿಮ್ಮಾಪೂರ- ಬಾಗಲಕೋಟೆ
ಚೆಲುವರಾಯಸ್ವಾಮಿ- ಮಂಡ್ಯ
ಎಸ್.ಎಸ್.ಮಲ್ಲಿಕಾರ್ಜುನ್- ದಾವಣಗೆರೆ
ಸಂತೋಷ್ ಲಾಡ್- ಧಾರವಾಡ
ಶಿವರಾಜ್ ತಂಗಡಗಿ-ಕೊಪ್ಪಳ
ಡಿ.ಸುಧಾಕರ್- ಚಿತ್ರದುರ್ಗ
ಎಂ.ಸಿ.ಸುಧಾಕರ್- ಚಿಕ್ಕಬಳ್ಳಾಪುರ

ಯಾರಿಗೆಲ್ಲಾ ತವರು ಜಿಲ್ಲೆ ಮಿಸ್?
ಶಿವಾನಂದ ಪಾಟೀಲ್
ಲಕ್ಷ್ಮೀ‌ಹೆಬ್ಬಾಳ್ಕರ್
ದಿನೇಶ್ ಗುಂಡೂರಾವ್
ಕೆ.ಹೆಚ್.ಮುನಿಯಪ್ಪ
ಕೆ.ಜೆ.ಜಾರ್ಜ್
ಜಮೀರ್ ಅಹ್ಮದ್
ರಾಮಲಿಂಗಾರೆಡ್ಡಿ
ಶರಣಪ್ರಕಾಶ್ ಪಾಟೀಲ್
ಕೆ.ಎನ್.ರಾಜಣ್ಣ
ಕೆ.ವೆಂಕಟೇಶ್
ಬಿ.ಎಸ್.ಸುರೇಶ್
ಎನ್.ಎಸ್.ಬೋಸರಾಜು

ದಿನೇಶ್ ಗುಂಡೂರಾವ್ ಬೆಂಗಳೂರಿನವರು ಆದ್ರೆ ದಕ್ಷಿಣಕನ್ನಡದ ಉಸ್ತುವಾರಿ ನೀಡಲಾಗಿದೆ..ಹೇಳಿ ಕೇಳಿ ದಕ್ಷಿಣ ಕನ್ನಡ ಅಂದ್ರೆ ಕೋಮುಗಲಭೆಗಳ ಕೇಂದ್ರ..ಯಾವಾಗ್ಲೂ ಸದ್ದುಗದ್ದಲಗಳಾಗುತ್ವೆ ಅನ್ನೋ ಮಾತಿದೆ..ದಿನೇಶ್ ಗುಂಡೂರಾವ್ ಸಂಘಪರಿವಾರ ಹಾಗೂ ಬಿಜೆಪಿ ಅಂದ್ರೆ ಉರಿದು ಬೀಳ್ತಾರೆ..ಹೀಗಾಗಿ ಅವರನ್ನ ದಕ್ಷಿಣಕನ್ನಡ ಉಸ್ತುವಾರಿಯನ್ನಾಗಿ ಮಾಡಿದ್ರೆ ಇದಕ್ಕೆಲ್ಲೆ‌ಬ್ರೇಕ್ ಹಾಕ್ತಾರೆ ಅನ್ನೋ ಲೆಕ್ಕಾಚಾರದ ಮೇಲೆಯೇ ಸಿದ್ರಾಮಯ್ಯ ಜವಾಬ್ದಾರಿ ನೀಡಿದ್ದಾರೆನ್ನಲಾಗ್ತಿದೆ..ಇನ್ನು ಲೋಕಸಭೆ ಚುನಾವಣೆಯಿಂದ ದೇವೇಗೌಡರ ವಿರುದ್ಧ ನೇರ ಕತ್ತಿ‌ಮಸೆದವರು ಸಚಿವ ಕೆ.ಎನ್.ರಾಜಣ್ಣ..ಗೌಡರ ಕುಟುಂಬ ರಾಜಕಾರಣದ ವಿರುದ್ಧ ನೇರಾ ನೇರ ಫೈಟ್ ಮಾಡುವಂತವರು..ಹಾಸನ ಗೌಡರ ಕುಟುಂಬದ ಭದ್ರಕೋಟೆ..ಹೀಗಾಗಿಯೇ ಹಾಸನದ ಉಸ್ತುವಾರಿಯನ್ನ ಅವರಿಗೆ ಸಿಎಂ ಬೇಕೆಂದೇ ನೀಡಿದ್ದಾರೆನ್ನಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯಕ್ರಮದಲ್ಲಿ ಪೀತಾಂಬರ ಪೀಠಕ್ಕೆ ತೆರಳುತ್ತಿರುವ ಬಗ್ಗೆ ಮಾತನಾಡಿದ ಡಿಕೆಶಿ