Select Your Language

Notifications

webdunia
webdunia
webdunia
webdunia

ಕಾರ್ಯಕ್ರಮದಲ್ಲಿ ಪೀತಾಂಬರ ಪೀಠಕ್ಕೆ ತೆರಳುತ್ತಿರುವ ಬಗ್ಗೆ ಮಾತನಾಡಿದ ಡಿಕೆಶಿ

ಕಾರ್ಯಕ್ರಮದಲ್ಲಿ ಪೀತಾಂಬರ ಪೀಠಕ್ಕೆ ತೆರಳುತ್ತಿರುವ ಬಗ್ಗೆ ಮಾತನಾಡಿದ ಡಿಕೆಶಿ
bangalore , ಶನಿವಾರ, 10 ಜೂನ್ 2023 (16:17 IST)
ಪೀತಾಂಬರ ಪೀಠಕ್ಕೆ ತೆರಳುತ್ತಿರುವ ಬಗ್ಗೆ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು,ಹಿಂದೆ ನೆಹರು ಯುದ್ಧ ನಿಲ್ಲುವಂತೆ ಹರಕೆ ಹೊತ್ತಿದ್ದ‌ ಪವಿತ್ರ ಕ್ಷೇತ್ರವಾದ ಗ್ವಾಲಿಯರ್ ನಲ್ಲಿರುವ ಪೀಠಕ್ಕೆ ನಾನು ಹೋಗ್ತಿದ್ದೇನೆ.ಒಂದಷ್ಟು ಫಲಗಳು ಲಭಿಸಿದ ಮೇಲೆ ಬರುವುದಾಗಿ ಅಂದುಕೊಂಡಿದ್ದೆ.ಹೀಗಾಗಿ ಗ್ವಾಲಿಯರ್ ‌ತೆರಳುತ್ತಿದ್ದೇನೆ.ಒಂದಷ್ಟು ಸಮಯ ಬದಲಾವಣೆ ಮಾಡಿಕೊಳ್ಳಬೇಕಾಯಿತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ನಾಳೆ ಮಹಿಳೆಯರಿಗೆ ಉಚಿತವಾಗುವ ‌ಪ್ರಯಾಣದ ಕಾರ್ಯಕ್ರಮ ಉದ್ಘಾಟನೆ ಇದೆ.ನೀನೆ ಮುಹೂರ್ತ ‌ಇಟ್ಟು ಉದ್ಘಾಟನೆಗೆ ಇರದೇ‌ ಇದ್ರೆ ಹೇಗಪ್ಪ ಅಂತ ಮುಖ್ಯಮಂತ್ರಿಗಳು ಹೇಳಿದ್ರು.ಹೀಗಾಗಿ ‌ಸ್ವಲ್ಪ ಸಮಯವನ್ನ ಬದಲಾವಣೆ ಮಾಡಿಕೊಂಡು ಹೋಗಿ ಬರ್ತಿದ್ದೇನೆ.ಇನ್ನೂ ಕಾರ್ಯಕ್ರಮದಲ್ಲಿ  ಭಾಷಣ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಇದೊಂದು ಪವಿತ್ರವಾದ ಕಾರ್ಯಕ್ರಮವಾಗಿದೆ.ಇನ್ನೂ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಿದಕ್ಕೆ ಡಿಸಿಎಂ ಡಿಕೆ ಶಿವಕುಮಾರ್  ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಪ್ರಾರ್ಥನೆ ವೇಳೆ ಶತ್ರು ಅನ್ನೋ ಅರ್ಥ ಅಂತ ಉಲ್ಲೇಖವಾಗಿದೆ.ಈ ಕಾರ್ಯಕ್ರಮದಲ್ಲಿ  ಹಾಗೇ  ಇರಬರದು .ಅನ್ನೋದು ನನ್ನ ಅಭಿಪ್ರಾಯ.ಪ್ರಾರ್ಥನೆ  ಮಾಡಿದ ಹೆಣ್ಣು ಮಗಳು ಪರವಾಗಿ ನಾನೇ ಹೇಳ್ತಿನಿ ಎಂದು ಶ್ಲೋಕಗಳನ್ನು ಹೇಳಿ ಡಿಸಿಎಂ ಸರಿಪಡಿಸಿದ್ರು.
 
ನಮಗೆ ಯಾರೂ ಶತೃುಗಳಿಲ್ಲ ಎಂದು ಗಾಂಧಿ ಹೇಳಿದ್ದಾರೆ.ಅವರು ಮಾಡಿದ್ದು ಅವರಿಗೆ ಪ್ರಾರ್ಥನೆ ಮಾಡಿದ ವಿದ್ಯಾರ್ಥಿನಿಯ ಪರವಾಗಿ ಎಲ್ಲರಿಗೂ ಶುಭವಾಗಲಿ ಎಂದು ಪ್ರಾರ್ಥಿಸಿ, ಪ್ರಾರ್ಥನಾ ಗೀತೆಯ ಲೋಪವನ್ನ ಡಿಕೆ ಶಿವಕುಮಾರ್  ಸರಿಪಡಿಸುವ ಯತ್ನ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಪ್ರಾರ್ಥನೆ ವಿದ್ಯಾರ್ಥಿನಿಯ ಕುರಿತು ಶಿವಕುಮಾರ್ ಪ್ರಾರ್ಥನೆ ಮಾಡಿದ್ದು,ತಮ್ಮ ಸಂಸ್ಕೃತ ಪಾಂಡಿತ್ಯ ಪ್ರದರ್ಶನ ನಾನು ಮತ್ತೆ ಬರ್ತಿನಿ ಎಂದು ಹೇಳಿದ್ದೆ, ಹಾಗಾಗಿ ಗ್ವಾಲಿಯರ್ ಹೋಗ್ತಿದ್ದೇನೆ.ಒಳ್ಳೇದು ಮಾಡೋದಿದ್ರೆ ಇವತ್ತೆ ಮಾಡಬೇಕು.ನಾಳೆ ಬಗ್ಗೆ ‌ಯೋಚಿಸಬಾರದು ಎಂದು ಡಿಸಿಎಂ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಗೊಂದಲಗಳಿಗೂ ಉತ್ತರ ಸಿಗಲಿದೆ ಎಂದ ಸಚಿವ ಕೆ.ಜೆ ಜಾರ್ಜ್