Publish Date: Sat, 10 Jun 2023 (15:14 IST)
Updated Date: Sat, 10 Jun 2023 (15:16 IST)
ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದು,ಹೊಸ ಮನೆಗಳಿಗೂ, ಶಿಫ್ಟಿಂಗ್ ಆಗುವವರಿಗೂ ಉಚಿತ ವಿದ್ಯುತ್ ಸಿಗಲಿದೆ.ಆರ್.ಆರ್. ನಂಬರ್ ಗೆ ಓಟರ್ ಐಡಿ ಲಿಂಕ್ ಆಗಿದ್ರೆ ಸಾಕು ಅಥವಾ ಅಗ್ರಿಮೆಂಟ್ ಪತ್ರ ಇದ್ರೂ ಅವರೆಲ್ಲರಿಗೂ ಉಚಿತ ವಿದ್ಯುತ್ ನೆಯಲ್ಲಿ ಇದ್ದಾರೆ ಅನ್ನೋದಕ್ಕೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇದ್ರೆ ಸಾಕು.ಜುಲೈ ತಿಂಗಳಿಂದ ಫ್ರೀ ವಿದ್ಯುತ್, ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ.ಈ ತಿಂಗಳ ಬಿಲ್ ಮಾತ್ರ ಗ್ರಾಹಕರು ಕಟ್ಟಬೇಕು.ಬಹುಶಃ ಕಲಬುರ್ಗಿಯಲ್ಲಿ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ.ಆಧಾರ್ ಲಿಂಕ್ ಆಗಬೇಕು ಅನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ.ಜನರಿಗೆ ಸರಳವಾಗಿ ಯೋಜನೆ ತಲುಪಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ.ಸೋಮವಾರ ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಭೆ ಇದೆ.ಬಳಿಕ ಎಲ್ಲಾ ಗೊಂದಲಗಳಿಗೂ ಉತ್ತರ ಸಿಗಲಿದೆ ಎಂದ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.