Select Your Language

Notifications

webdunia
webdunia
webdunia
webdunia

ಮನಸ್ಸು ಕ್ಷಣಮಾತ್ರದಲ್ಲಿ ಕರಗುವ ಕ್ಷಣವಿದು

It is the moment where the mind melts
bangalore , ಬುಧವಾರ, 4 ಮೇ 2022 (18:15 IST)
ಮುದ್ದು ಸಾಕುಪ್ರಾಣಿಗಳ ದೃಶ್ಯಗಳನ್ನು ನೋಡುವ ಆನಂದವೇ ಬೇರೆ. ಮನಸ್ಸಿಗೆ ವಿಭಿನ್ನ ಹಿತ ನೀಡುತ್ತವೆ. ಸಾಕುಪ್ರಾಣಿಗಳ ಮುಗ್ಧತೆ, ಮುದ್ದಾದ ನೋಟ ಅರೆಕ್ಷಣದಲ್ಲಿ ನಮ್ಮ ಹೃದಯ ಸೆಳೆಯುತ್ತದೆ. ಅಂತದ್ದೇ ದೃಶ್ಯವೊಂದು ನೆಟ್ಟಿಗರ ಹೃದಯ ಗೆದ್ದಿದೆ. ಇಲ್ಲೊಬ್ಬಳು ಮುದ್ದು ಶ್ವಾನ ತನ್ನ ಕಂದಮ್ಮಗಳು ತನ್ನೊಂದಿಗೆ ಯಾಕೆ ಆಡುತ್ತಿಲ್ಲ ಎಂದು ಗೊಂದಲದಲ್ಲಿದ್ದಳು. ಇವಳ ಆ ಮುಗ್ಧ ನೋಟವೇ ಅವಳ ಹೃದಯದ ಭಾವನೆಗೆ ಕನ್ನಡಿಯಂತಿತ್ತು. @Yoda4ever ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯವನ್ನು ಅಪ್ ಲೋಡ್ ಮಾಡಲಾಗಿದೆ. ಈ ತಾಯಿ ತನ್ನ ಕಂದಮ್ಮಗಳಿಗೆ ಆಡುವ ಸಲುವಾಗಿಯೇ ಚೆಂಡನ್ನು ತಂದು ಒಳಗೆ ಹಾಕಿದ್ದಳು. ಈ ದೃಶ್ಯವನ್ನು ಶ್ವಾನದ ಮಾಲಕಿ ಸೆರೆ ಹಿಡಿದಿದ್ದರು. ಆದರೆ, ಚೆಂಡನ್ನು ತಂದರೂ ಪುಟಾಣಿಗಳು ಯಾಕೆ ಆಡುತ್ತಿಲ್ಲ ಎಂಬ ಗೊಂದಲ ಈ ತಾಯಿಯದ್ದು. ಇವಳಿಗೆ ಸಮಾಧಾನ ಹೇಳುವ ಮೂಲಕ ಇವಳ ಈ ಗೊಂದಲವನ್ನು ಪರಿಹರಿಸುವ ಯತ್ನವನ್ನು ಒಡತಿ ಮಾಡಿದ್ದರು. `ಅವುಗಳು ಆಡುವಷ್ಟು ದೊಡ್ಡದಾಗಿಲ್ಲ. ನಿನ್ನೊಂದಿಗೆ ಅತೀ ಬೇಗದಲ್ಲಿ ಇವುಗಳು ಆಡುತ್ತವೆ' ಎಂದು ಮಾಲಕಿ ತನ್ನ ಶ್ವಾನಕ್ಕೆ ಹೇಳುತ್ತಿರುವುದು ಇಲ್ಲಿ ಕೇಳಿಸುತ್ತದೆ. ಒಡತಿಯ ಮಾತನ್ನು ತನ್ನ ಮುಗ್ಧ ನೋಟದ ಜತೆಗೆ ಈ ತಾಯಿ ಆಲಿಸುವ ಈ ದೃಶ್ಯವನ್ನು ನೋಡುವಾಗಲೇ ಮನಸ್ಸು ಕರಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಮದುವೆ ಕನಸು ನನಸು