Publish Date: Wed, 04 May 2022 (18:06 IST)
Updated Date: Wed, 04 May 2022 (18:08 IST)
ಹೊಲಗಳಿಗೆ ಕರಡಿಗಳು ಲಗ್ಗೆಯಿಟ್ಟು ಬೆಳೆ ನಾಶ ಮಾಡುತ್ತಿರುವ ಹಿನ್ನೆಲೆ ವಿಜಯನಗರ ಜಿಲ್ಲೆಯ ರೈತರು ಹೈರಾಣಾಗಿದ್ದಾರೆ. ಹಗಲು- ರಾತ್ರಿ ಎನ್ನದೇ ಕರಡಿಗಳು ಕಾಟ ನೀಡುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳ ರಕ್ಷಣೆಗೆ ರೈತರು ಹರಸಾಹಸ ಪಡುತ್ತಿದ್ದಾರೆ. ಜೀವದ ಹಂಗು ತೊರೆದು ಕರಡಿಗಳನ್ನು ಓಡಿಸಿ, ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳೋ ಪರಿಸ್ಥಿತಿ ಎದುರಾಗಿದೆ. ಸ್ವಲ್ಪ ಯಾಮಾರಿದ್ರೂ ಕರಡಿಗಳು ರೈತನ ಮೇಲೆ ತಿರುಗಿ ಬೀಳ್ತವೆ. ಕೂಡ್ಲಿಗಿ ತಾಲೂಕಿನ ಭೀಮಸಮುದ್ರ, ಕರಡಿಹಳ್ಳಿ, ಕಡೆಕೋಳ, ಮಾಕನಡಕ, ಗುಂಡುಮುಣುಗು, ಕುರಿಹಟ್ಟಿ ಗ್ರಾಮಗಳಲ್ಲಿ ರೈತರಿಗೆ ಈ ಫಜೀತಿ ಎದುರಾಗಿದೆ. ಗುಡೇಕೋಟೆ ಕರಡಿಧಾಮ ಪಕ್ಕದಲ್ಲೇ ಇದ್ರೂ ಕೂಡ ರೈತರ ಜಮೀನುಗಳಿಗೆ ಕರಡಿಗಳು ಲಗ್ಗೆ ಇಡುತ್ತಿವೆ.