Publish Date: Wed, 04 May 2022 (18:09 IST)
Updated Date: Wed, 04 May 2022 (18:14 IST)
ಬಹು ದಿನದ ಆಸೆಯಂತೆ ಜೋಡಿಯೊಂದು ತಮ್ಮ ಮದುವೆಯನ್ನು ವಿಮಾನದಲ್ಲಿ ಮಾಡಿಕೊಳ್ಳುವ ಮೂಲಕ ಮದುವೆ ಬಗ್ಗೆ ಇಟ್ಟುಕೊಂಡಿದ್ದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅಮೆರಿಕದ ಒಕ್ಲಾಹಮ್ ನಗರದ ಈ ಜೋಡಿ ಚಲಿಸುತ್ತಿರುವ ವಿಮಾನದಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ವಿಮಾನದಲ್ಲೇ ಮದುವೆಯಾಗಲು ಕಾರಣವೂ ಇದೆ. ಅದೇನೆಂದರೆ, ಪಾಮ್ ಪ್ಯಾಟರ್ಸನ್ ಮತ್ತು ಜೆರಿಮಿ ಸಾಲ್ಡಾ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಪಾಮ್ ತನ್ನ ಗೆಳತಿ ಆಸೆಯಂತೆ ತಮ್ಮಿಬ್ಬರ ಮದುವೆ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಇರಬೇಕು ಎಂದು ಹೇಳಿದ್ದನ್ನು ನಿಜವಾಗಿಯೂ ವಿಮಾನದಲ್ಲಿ ಮದುವೆಯಾಗುವ ಮೂಲಕ ಉಡುಗೊರೆ ನೀಡಿದ್ದಾರೆ. ಮದುವೆಯಾಗುವ ಬಗ್ಗೆ ಈಕೆಗೆ ತಿಳಿದಿರಲಿಲ್ಲ. ಈ ಮುಂಚೆಯೇ ಟಿಕೆಟ್ ಬುಕ್ ಮಾಡಿ, ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿತ್ತು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗಲೇ ತಾನು ಇಲ್ಲೇ ಮದುವೆಯಾಗುತ್ತಿರುವುದಾಗಿ ಹೇಳಿದಾಗ ಆಕೆಗೆ ತುಂಬಾ ಸಂತೋಷವಾಯಿತು. ಹಾಗೆ ಆಕೆಯ ಕನಸನ್ನು ಈಡೇರಿಸಿದಂತಾಯಿತು ಎಂದು ಪಾಮ್ ಹೇಳಿಕೊಂಡಿದ್ದಾರೆ.