Select Your Language

Notifications

webdunia
webdunia
webdunia
webdunia

ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳೋಕೆ ಆಗ್ತಿಲ್ಲ- ಡಿಕೆಶಿ

ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳೋಕೆ ಆಗ್ತಿಲ್ಲ- ಡಿಕೆಶಿ
bangalore , ಸೋಮವಾರ, 26 ಜೂನ್ 2023 (21:44 IST)
ಗ್ಯಾರೆಂಟಿ ಯೋಜನೆ ಜಾರಿ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ನಾವೇನು ಮಾತು ಕೊಟ್ಟಿದ್ವೊ ಅದನ್ನ ಉಳಿಸಿಕೊಳ್ಳುತ್ತೇವೆ.5 ಯೋಜನೆಗಳನ್ನು ಜಾರಿಗೆ ತರುತ್ತೇವೆ.ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳೋಕೆ ಆಗ್ತಿಲ್ಲ.ಒಂದು ಕಾಳು ಕಡಿಮೆಯಾದ್ರೂ ಪ್ರತಿಭಟನೆ ಮಾಡೋದಾಗಿ ಹೇಳಿದ್ದಾರೆ.365 ದಿನವೂ ಪ್ರತಿಭಟನೆ ಮಾಡಲಿ.ಅವರು ಹೋರಾಟ ಮಾಡ್ತಿರಬೇಕು,ವಿರೋಧ ಮಾಡ್ತಿರಬೇಕು,ಬಿಜೆಪಿಯವರು ವಿಪಕ್ಷದಲ್ಲಿ ಕೂತಿರಬೇಕು.ನಾವು ಆಡಳಿತದಲ್ಲಿ‌ ಜನರ ಸೇವೆ ಮಾಡುತ್ತಿರಬೇಕು ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
 
ಅನ್ನಭಾಗ್ಯ ಜಾರಿ ವಿಚಾರವಾಗಿ ಭತ್ತ ಅಕ್ಕಿ ಒಂದೇ ದಿನದಲ್ಲಿ ಬೆಳೆಯೋಕೆ ಆಗುತ್ತಾ!?ಅಕ್ಕಿ‌ ಕೊಡಿ ಎಂದು ಕೇಂದ್ರ ಸರ್ಕಾರವನ್ನ ಕೇಳ್ತಿದ್ದೇವೆ,ಅವ್ರು ಕೊಡ್ತಿಲ್ಲ.ಅಕ್ಕಿ ಮೋದಿ ಕೊಟ್ಟಿದ್ದು ಎಂದು ಬೊಮ್ಮಾಯಿ ಹೇಳಿದ್ರು.ಸೋನಿಯಾ ಗಾಂಧಿ ನೇತೃತ್ವದ ಯುಪಿಎನಲ್ಲಿ ಮನಮೋಹನ್ ಸಿಂಗ್ ಅಕ್ಕಿ ಕಾನೂನು ತಂದಿದ್ದು.ಇದು ಕಾಂಗ್ರೆಸ್ ಸರ್ಕಾರದ ಯೋಜನೆ.ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರು.ಅನ್ನ ಭಾಗ್ಯ ಕಾನೂನು ತಂದಿದ್ದು ಕಾಂಗ್ರೆಸ್5 ಕೆಜಿ ಯಿಂದ 10 ಕೆಜಿಗೆ ಅಂತ ತಂದಿದ್ದೇವೆ ಅದನ್ನು ಕೊಡಲಿದೆ.ರಾಗಿ,ಗೋಧಿ ಕೊಡಿ ಎಂದು ಕೆಲವರು ಕೇಳಿದ್ದಾರೆ.ಕೇಂದ್ರ ಸರ್ಕಾರ ಅಕ್ಕಿ ಕೊಡದೇ ಇದ್ದಾಗ ವಿಧಿ ಇಲ್ಲದೇ ಬೇರೆ ಕಡೆ ಖರೀದಿ ಮಾಡಿ ಕೊಡ್ತೀವಿ ಎಂದು  ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ಮೇಲೆ ಅಪಾದನೆ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಕ್ರೀದ್ ಹಿನ್ನೆಲೆ ಪ್ರಾಣಿವಧೆ ನಿಷೇಧಿಸಿ ಬಿಬಿಎಂಪಿ ಆದೇಶ