Select Your Language

Notifications

webdunia
webdunia
webdunia
webdunia

ಗೃಹ ಲಕ್ಷ್ಮಿಯನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ- ಡಿಕೆಶಿ

I have held Griha Lakshmi myself a little
bangalore , ಶನಿವಾರ, 24 ಜೂನ್ 2023 (17:12 IST)
ಗೃಹ ಲಕ್ಷ್ಮಿ ಯೋಜನೆ ವಿಳಂಬ ವಿಚಾರ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಗೃಹ ಲಕ್ಷ್ಮಿಯನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ.ನಾನೇ ಚೀಫ್ ಮಿನಿಸ್ಟರ್ ಜೊತೆ ಮಾತಾಡಿ ಹೋಲ್ಡ್ ಮಾಡಿಸಿದ್ದೇನೆ.ಗಲಾಟೆ ಕಡಿಮೆ ಮಾಡಲು ರೀತಿಯಲ್ಲಿ ಮಾಡ್ತಿದ್ದೇನೆ.ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಮಂತ್ರಿಗಳು ಇರಲಿಲ್ಲ.ಅವರ ಜೊತೆ ಇವತ್ತು ಒಂದು ಮೀಟಿಂಗ್ ಮಾಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಸರಳತೆ ಮೂಲಕ ಯೋಜನೆ ಅನುಷ್ಠಾನ ಮಾಡ್ತೀವಿ.ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಹಾಕಬೇಕು.ಆ ರೀತಿಯಲ್ಲಿ ಯೋಜನೆ ಜಾರಿಗೆ ತರ್ತೇವೆ.ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನ ಮಾಡ್ತೇವೆ.ಅಪ್ಲಿಕೇಶನ್ ಫ್ರೀಯಾಗಿ ಮಾಡಿಕೊಡಬೇಕು.ಯಾರಾದರೂ ಸಂಘ ಸಂಸ್ಥೆಗಳು ಹಣ ವಸೂಲಿ ಮಾಡಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ಈಗಾಗಲೇ ೨೦೦ ರಿಂದ ೫೦೦ ಹಣ ಪಡೀತಾ ಇದ್ದಾರೆ ಎಂಬ ಮಾಹಿತಿ ಇದೆ.ಅದು ಗೊತ್ತಾದ್ರೆ ಅವರ ಏಜೆನ್ಸಿ ಕೂಡ ಕ್ಯಾನ್ಸಲ್ ಮಾಡ್ತೀವಿ.ಈ ಸ್ಕೀಮ್ ಗಳಲ್ಲಿ ಯಾರು ಕೂಡ ಒಬ್ಬರಿಗೆ ಲಂಚ ಕೊಡಬಾರದು.ಲಂಚ ಕೊಟ್ಟರೆ ನಾವು ಒಂದು ಹೆಲ್ಪ್ ಲೈನ್ ನಂಬರ್ ಕೊಡ್ತೀವಿ.ಅದಕ್ಕೆ ಕಾಲ್ ಮಾಡಿ ದೂರು ಕೊಡಲಿ ಎಂದು ಡಿಕೆ  ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಡರ್ ಪಾಸ್‌ನಲ್ಲಿ ತಗಲಾಕಿಕೊಂಡ ಕಂಟೈನರ್