ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ರು.ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಕಾಂಗ್ರೆಸ್ ಗ್ಯಾರೆಂಟಿಗಳನ್ನ ಕೊಟ್ಟಿದ್ದೆವು.ಗ್ಯಾರೆಂಟಿಗಳನ್ನ ತರಲ್ಲ ಅಂತ ಅಂದುಕೊಂಡಿದ್ದರು.ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದ್ದರು.ನಾವು ಮೊದಲ ಕ್ಯಾಬಿನೆಟ್ ನಲ್ಲೇ ತಾತ್ವಿಕ ಬದ್ಧತೆ ತಿಳಿಸಿದ್ದೆವು.ಎರಡನೇ ಕ್ಯಾಬಿನೆಟ್ ನಲ್ಲಿ ದಿನಾಂಕ ತಿಳಿಸಿದ್ದೆವು.ಯಾವಾಗ ಜಾರಿ ಅನ್ನೋದನ್ನ ನಿಗದಿ ಮಾಡಿದ್ದೆವು.ಈಗಲೂ ನಮಗೆ ಮಾಧ್ಯಮಗಳು ಎಚ್ಚರಿಸುತ್ತಿವೆ.ನೀವು ಟೀಕೆ ಮಾಡಿದ್ರೂ ಬೇಜಾರಿಲ್ಲ.ನೀವು ನಮ್ಮನ್ನ ತಿದ್ದುತ್ತಿದ್ದೀರಿ ಅಂದುಕೊಂಡಿದ್ದೇವೆ.ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
ನಮ್ಮ ಬೆನ್ನು ತಟ್ಟಿಕೊಳ್ಳಲು ನಾನಿಲ್ಲಿ ಕೂತಿಲ್ಲ.ವಿಪಕ್ಷ ನಾಯಕರು ಯಾರೇ ಏನೇ ಚರ್ಚೆ ಮಾಡಿದರೂ ಅದಕ್ಕೆ ಉತ್ತರ ಕೊಡಲು ತಯಾರಿಲ್ಲ.ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.