Select Your Language

Notifications

webdunia
webdunia
webdunia
Friday, 11 April 2025
webdunia

ಮೋಸ ಮಾಡಿದ ಪ್ರೇಯಸಿಯ ಮೇಲೆ ಪ್ರಿಯತಮ ಈ ರೀತಿ ಸೇಡು ತೀರಿಸಿಕೊಳ್ಳುವುದಾ...?

ಮೋಸ
ಭುವನೇಶ್ವರ್ , ಶನಿವಾರ, 27 ಜುಲೈ 2019 (11:26 IST)
ಭುವನೇಶ್ವರ್: ಪ್ರೇಯಸಿ ತನಗೆ ಮೋಸ ಮಾಡಿ ಬೇರೆಯೊಬ್ಬನನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಪ್ರಿಯಕರನೊಬ್ಬ ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ಪರಲಖೇಮುಂಡಿಯಲ್ಲಿ ನಡೆದಿದೆ.



ಗಂಜಾಂ ಜಿಲ್ಲೆಯ ಕೈದಾಡಾ ಗ್ರಾಮದ ನಿವಾಸಿ ಕುಬರ್ ಪಲ್ಲೆ ಇಂತಹ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಗಜಪತಿ ಜಿಲ್ಲೆಯ ಪರಲಖೇಮುಂಡಿ ಪ್ರದೇಶದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಯುವತಿಯ ಪೋಷಕರು ಆಕೆಗೆ ಬೇರ ಯುವಕನ ಜೊತೆ ಮದುವೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರಿಯತಮ ತನ್ನ ಬಳಿ ಇದ್ದ ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

 

ಈ ವಿಡಿಯೋ ವೈರಲ್ ಆಗಿದ್ದು, ಇದನ್ನು ಗಮನಿಸಿದ ಯುವತಿ ಪರಾಲಖೇಮುಂಡಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತರ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಾಜಿ ಗೃಹಸಚಿವ