Publish Date: Sat, 12 Feb 2022 (14:32 IST)
Updated Date: Sat, 12 Feb 2022 (15:39 IST)
ಬಿಡ್ಡಿಂಗ್ ವೇಳೆ ಹರಾಜುದಾರ ಹಗ್ ಎಡ್ಮೀಡ್ಸ್ ವೇದಿಕೆಯಲ್ಲೇ ಕುಸಿದುಬಿದ್ದರು. ಪರಿಣಾಮವಾಗಿ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ತಂಡಗಳಿಗಾಗಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಹಗ್ ಎಡ್ಮೀಡ್ಸ್ ಚೇತರಿಸಿಕೊಂಡಿದ್ದಾರೆ ಎಂದು ಫ್ರಾಂಚೈಸ್ ಪ್ರತಿನಿಧಿಯೊಬ್ಬರು ಖಚಿತಪಡಿಸಿರುವುದಾಗಿ 'ಟಾಟಾ ಐಪಿಎಲ್ 2022' ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಹಗ್ ಎಡ್ಮೀಡ್ಸ್ ಆರಾಮವಾಗಿದ್ದಾರೆ. ಸದ್ಯ ಊಟದ ವಿರಾಮ ಘೋಷಿಸಲಾಗಿದೆ ಎಂದು 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಟ್ವೀಟ್ ಮಾಡಿದೆ.