Select Your Language

Notifications

webdunia
webdunia
webdunia
webdunia

ಪರವಾನಿಗೆ ಇಲ್ಲದೆ ಓಎಪ್‌‌ಸಿ‌ ಕೇಬಲ್ ಅಳವಡಿಕೆ!

ಪರವಾನಿಗೆ ಇಲ್ಲದೆ ಓಎಪ್‌‌ಸಿ‌ ಕೇಬಲ್ ಅಳವಡಿಕೆ!
bangalore , ಭಾನುವಾರ, 2 ಜುಲೈ 2023 (19:55 IST)
ಒಎಪ್‌ಸಿ ಕೇಬಲ್ ಅಳವಡಿಕೆಯ ಅವಾಂತರ ಇಂದು ನಿನ್ನೆಯದಲ್ಲ..ಹೊಸ ರಸ್ತೆ ಹಳೆ ರಸ್ತೆ ಎನ್ನದೇ ಯಾವುದೇ ಪರವಾನಿಗೆ ಇಲ್ಲದಿದ್ರು ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಕೇಬಲ್ ಅಳವಡಿಕೆ ಮಾಡ್ತಾರೆ.. ರಸ್ತೆಯನ್ನ ದುಸ್ತಿತಿಗೆ ತಂದು ಸಾರ್ವಜನಿಕರಿಗೆ ಸಮಸ್ಯೆಉಂಟು ಮಾಡ್ತಾರೆ.ಇಷ್ಟಲ್ಲ ಆದ್ರೂ ಇವ್ರಿಗೆ ಕಡಿವಾಣ ಮಾತ್ರ ಹಾಕೊಕೆ ಅಧಿಕಾರಿಗಳು ಮುಂದಾಗ್ತಿಲ್ಲ .ಎನ್ನೋ ಆರೋಪ ಕೇಳಿ ಬರ್ತಾನೆ ಇತ್ತು.ಇದೀಗ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ‌ ಮೇಲೆ ಪುಟ್ಟೇನ ಹಳ್ಳಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ನಗರ ಅರೆಕೆರೆ, ಬ್ರಿಗೇಡ್ ಮಿಲೇನಿಯಂ‌ ಮುಖ್ಯರಸ್ಥೆಗಳಲ್ಲಿ‌ ಈ ಹಿಂದೆ ಜಿಯೋ ಕೇಬಲ್ ಅಳವಡಿಕೆ‌ ಮಾಡಲಾಗಿತ್ತು.ಜಿಯೋ ಡಿಜಿಟಲ್ ಪೈಬರ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಬಿಬಿಎಂಪಿಯಿಂದ ಯಾವುದೇ ಅನುಮತಿ ಪಡೆಯದೇ ಕೇಬಲ್ ಅಳಮಾಡಿಕೆ ಮಾಡಿದ್ದು ಸರ್ಕಾರಕ್ಕೆ‌ ತೆರಿಗೆ ವಂಚನೆಯಾಗಿದೆ‌ ಅದಷ್ಟೇ ಅಲ್ಲದೇ ಕೆಲವು ಕಡೆ ಕುಡಿಯುವ ನೀರು ಪೂರೈಸುವ ಪೈಫ್ ಗಳಿಗ ಹಾನಿಮಾಡಿದ್ದಾರೆ ಹೊಸ ರಸ್ತೆಗಳನ್ನ ಪರವಾನಿಗೆ ಇಲ್ಲದೇ ಅಗೆದು ಹಾಳುಮಾಡಿದ್ದಾರೆ .ಡ್ರಾನೇಜ್ ಪೈಪ್ ಗಳಿಗೆ ಹಾನಿಯಾಗಿದೆ..ಕೆಲವು ಕಡೆ ಕುಡಿಯುವ ನೀರಿನ‌ ಪೈಪ್ ಮತ್ತು ಡ್ರಾನೇಜ್ ಪೈಪ್ ಗಳೆರಡು ಒಡೆದು ಡ್ರಾನೇಜ್ ನೀರು ಕುಡಿಯುವ ನೀರಿನ ಪೈಪ್‌ಗಳಿಗೆ ಸೇರುತ್ತಿದೆ.ಇ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಬಿಬಿಎಂಪಿ ಅದಿಕಾರಿಗಳಿಗ ಮನವಿಸಲ್ಲಿಸಿದರು ಪ್ರಯೊಜನವಾಗಿಲ್ಲ,ಅಧಿಕಾರಿಗಳು ಕ್ರಮ‌ಕೈಗೊಳ್ಳದ ಹಿನ್ನೆಲೆ ಸ್ಥಳೀಯರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.ಸಾಮಾಜಿಕ ಕಾರ್ಯಕರ್ತ ರೊಲ್ಯಾಂಡ್ ಸೋನ್ಸ್ ಪುಟ್ಟೇನ‌ಹಳ್ಲಿಯಲ್ಲಿ ಪ್ರಕರಣ ದಾಖಲಿಸಿದ್ದು ಬಿಬಿಎಂಪಿಯ ಅರೆಕೆರೆ ಸಭ್ ಡಿವಿಷನ್ ನ AEEಪ್ರಕಾಶ್ ಮತ್ತು ಬಿಡಬ್ಲ್ಯೂ ಎಸ್‌ಎಸ್‌ಬಿ ಸೌತ್ 2ಸಬ್ ಡಿವಿಷನ್ ನ ವಿನಾಯಕ್ ನಾಯಕ್ ಮೇಲೆ ಇದೀಗ ಎಪ್‌ಐಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ-ಸಿಎಂ