Select Your Language

Notifications

webdunia
webdunia
webdunia
webdunia

ವರ್ಗಾವಣೆ ದಂದೆ, ಗ್ಯಾರಂಟಿ ಯೋಜನೆಗಳೇ ಜೆಡಿಎಸ್ ನಾಯಕರ ಸದನದ ಅಸ್ತ್ರ..!

ವರ್ಗಾವಣೆ ದಂದೆ, ಗ್ಯಾರಂಟಿ ಯೋಜನೆಗಳೇ ಜೆಡಿಎಸ್ ನಾಯಕರ ಸದನದ ಅಸ್ತ್ರ..!
bangalore , ಭಾನುವಾರ, 2 ಜುಲೈ 2023 (19:14 IST)
ನಾಳೆಯಿಂದ 14 ರವರೆಗೆ ನಡೆಯಲಿರುವ ವಿಧಾನಸಭೆಯ ಅಧಿವೇಶನ ಸಾಕಷ್ಟು ಕುತುಹಲ ಮೂಡಿಸಿದೆ.ಇವತ್ತು ದಳಪತಿಗಳು ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ರು. ನಾಳೆಯಿಂದ ಶುರುವಾಗುವ ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ಜಿಲ್ಲಾ ಮತ್ತು ಜಿಲ್ಲಾ ಘಟಕಗಳ ಪುನಾರಚನೆ, ರಾಜ್ಯ ಘಟಕದ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮಹತ್ವದ ಸಭೆ ನಡೆಸಿದ್ರು ಜೆಡಿಎಸ್ ನಾಯಕರು.

ಸರ್ಕಾರದ ಮೊದಲ ಅಧಿವೇಶನದ ಪ್ರಾರಂಭಕ್ಕೂ ಮೊದಲೇ, ವರ್ಗಾವಣೆಯ ಬಾಂಬ್ ಅನ್ನ ಸಿಡಿಸಿರುವ ಕುಮಾರಸ್ವಾಮಿ ಸರ್ಕಾರಕ್ಕೆ ತಲೆನೋವಾಗುತ್ತಾರಾ ಅನ್ನೋ ಚರ್ಚೆ ಶುರುವಾಗಿದೆ..ನಾಳೆಯಿಂದ ಅಧಿವೇಶನ ಪ್ರಾರಂಭ ಆಗುತ್ತೆ, ಅಧಿವೇಶನದಲ್ಲಿ ನಮ್ಮ ‌ಪಕ್ಷದ ನಿಲುವಿನ ಬಗ್ಗೆ ನಾಯಕರ ಅಭಿಪ್ರಾಯ,ಸಲಹೆ ಪಡೆದು ನಮ್ಮ ಪಕ್ಷದ ನಿಲುವು ಹೇಗಿರಬೇಕು ಅಂತ ತೀರ್ಮಾನ ಮಾಡ್ತೀನಿ.. ಕಡಿಮೆ ಸ್ಥಾನ ಇದ್ದರು‌ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತ ಸಭೆಯಲ್ಲಿ ತೀರ್ಮಾನ ಮಾಡ್ತೀವಿ ಅಂತಾ ಮಾಹಿತಿ ನೀಡಿದ್ರು ಮಾಜಿ ಸಿಎಂ ಕುಮಾರಸ್ವಾಮಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಗಿನೆಲೆ ಮಠದ ಶಾಖಾ‌ಮಠದ ಭೂಮಿ ಪೂಜೆ ಕಾರ್ಯಕ್ರಮ