Select Your Language

Notifications

webdunia
webdunia
webdunia
webdunia

ವೇತನ ನೀಡದಿದ್ದಲ್ಲಿ ಜುಲೈ 8 ರಿಂದ ಸಾಮೂಹಿಕ ರಜೆ ಘೋಷಣೆ..!

ವೇತನ ನೀಡದಿದ್ದಲ್ಲಿ ಜುಲೈ 8 ರಿಂದ ಸಾಮೂಹಿಕ ರಜೆ ಘೋಷಣೆ..!
bangalore , ಭಾನುವಾರ, 2 ಜುಲೈ 2023 (18:50 IST)
ಸರ್ಕಾರದ 108-ಆರೋಗ್ಯ ಕವಚ ಯೋಜನೆಯನ್ನು ನಡೆಸುತ್ತಿರುವ ಜಿ.ವಿ.ಕೆ ಸಂಸ್ಥೆ ಕಳೆದ 4 ತಿಂಗಳಿಂದ ವೇತನ ನೀಡಿಲ್ಲವೆಂದು ಸಂಸ್ಥೆಯ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಸುಮಾರು 3 ಸಾವಿರ ಸಿಬ್ಬಂದಿಗಳು ಕೆಲಸ ಮಾಡ್ತಾ ಇದ್ದು, ಸಾಮೂಹಿಕ ರಜೆ ಹಾಕಿದ್ದೇ ಆದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.ಕಳೆದ 4 ತಿಂಗಳಿಂದ ವೇತನ ಆಗಿಲ್ಲ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮುಂದೆ ಬಂದು ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಸಾಮೂಹಿಕ ರಜೆ ತೆಗೆದುಕೊಳ್ಳಲು ಸಿಬ್ಬಂದಿಗಳು ನಿರ್ಧರಿಸಲಾಗಿದೆ. ಬಾಕಿ ಉಳಿದಿರುವ ವೇತನದ ಜೊತೆಗೆ ಸಿಬ್ಬಂದಿಗೆ ವೇತನವನ್ನು ಹೆಚ್ಚಳ ಮಾಡಬೇಕು, ಪ್ರಸ್ತುತ ಸಿಗುತ್ತಿರುವ ವೇತನ ಸಾಲತ್ತಿಲ್ಲ ಎಂದು ತಮ್ಮ ಬೇಡಿಕೆಯನ್ನು ಸಹ ಮುಂದಿಟ್ಟಿದ್ದಾರೆ.

ಸರ್ಕಾರದ ಬೊಕ್ಕಸದಿಂದ ಈಗಾಗಲೇ 2022-23 ನೇ ಸಾಲಿನ ಎರಡನೇ ತ್ರೈಮಾಸಿಕಕ್ಕೆ 2,499.97 ಲಕ್ಷಗಳ ಅನುದಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ, ಇಎಂಆರ್ ಐ ಇಲಾಖೆಯಿಂದ ಜಿವಿಕೆ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಒಪ್ಪಂದದ ಪ್ರಕಾರ ಪೂರ್ಣ ಅನುದಾನ ಬಿಡುಗಡೆಗೊಳಿಸಲಾಗಿದೆ. ಸೆಪ್ಟೆಂಬರ್ 2022 ಅಂತ್ಯದವರೆಗಿನ ವೇತನ, ವಿಮೆ, ವಾಹನ ರಿಪೇರಿ, ಇಂಧನ ಹಾಗೂ ಇನ್ನಿತರ ವೆಚ್ಚಗಳನ್ನು ಈ ಅನುದಾನದಲ್ಲೇ ಜಿವಿಕೆ ಸಂಸ್ಥೆ ನಿರ್ವಹಿಸಬೇಕಿದೆ. ಆದ್ರೆ ಸಂಸ್ಥೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ