Publish Date: Tue, 15 Mar 2022 (19:18 IST)
Updated Date: Tue, 15 Mar 2022 (19:20 IST)
ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಹಾಗೂ ಭಾಗಶಃ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂತರ್ಜಲ 1200 ಅಡಿವರೆಗೂ ಕುಸಿತವಾಗಿದ್ದು, ಕುಣಿಗಲ್ ತಾಲೂಕಿನಲ್ಲಿ ಮಧ್ಯಮ ವಲಯಲ್ಲಿದೆ ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ಅವರ ಪ್ರಶ್ನೆಗೆ ಸಚಿವ ಜೆ.ಸಿ. ಮಾಧುಸ್ವಾಮಿ ಉತ್ತರಿಸಿದರು. ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಅಂತರ್ಜಲ 750 ಅಡಿಯಿಂದ 1200 ಅಡಿ ಆಳದಲ್ಲಿ ಅಂತರ್ಜಲ ಲಭ್ಯವಾಗುತ್ತಿದೆ. ಚೆಕ್‍ಡ್ಯಾಮ್ ನಿರ್ಮಾಣ ಮಾಡುವ ಬಗ್ಗೆ ನೀರಾವರಿ ಇಲಾಖೆ ಕಾರ್ಯದರ್ಶಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕಾವೇರಿ ನದಿನೀರು ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗಿರುವುದರಿಂದ ವಿಳಂಬವಾಗುತ್ತಿದೆ ಎಂದು ತಿಳಿಸಿದರು.