Select Your Language

Notifications

webdunia
webdunia
webdunia
webdunia

ಭಾರತದಿಂದ ವೈದ್ಯಕೀಯ ನೆರವು

ಭಾರತದಿಂದ ವೈದ್ಯಕೀಯ ನೆರವು
ನವದೆಹಲಿ , ಸೋಮವಾರ, 28 ಫೆಬ್ರವರಿ 2022 (20:12 IST)
ನವದೆಹಲಿ : ಉಕ್ರೇನ್ಗೆ ಭಾರತದಿಂದ ವೈದ್ಯಕೀಯ ನೆರವನ್ನು ಕಳುಹಿಸಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಸೋಮವಾರ ತಿಳಿಸಿದ್ದಾರೆ.

ರಷ್ಯಾ ದಾಳಿಯಿಂದಾಗಿ ಉಕ್ರೇನ್ ತತ್ತರಿಸಿ ಹೋಗಿದೆ. ಸೈನಿಕರು ಮಾತ್ರವಲ್ಲದೇ ದೇಶವನ್ನು ರಕ್ಷಿಸಲು ಬಯಸುವ ನಾಗರಿಕರಿಗೂ ಉಕ್ರೇನ್ ಶಸ್ತ್ರಾಸ್ತ್ರ ನೀಡುತ್ತಿದೆ. ಇದೀಗ ಯುದ್ಧದಿಂದ ನಲುಗಿರುವ ದೇಶಕ್ಕೆ ಸಹಾಯ ಮಾಡಲು ಭಾರತ ವೈದ್ಯಕೀಯ ಹಾಗೂ ಮಾನವೀಯ ನೆರವನ್ನು ನೀಡಲು ಮುಂದಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಾಗ್ಚಿ ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಈಗಾಗಲೇ 6 ವಿಮಾನಗಳನ್ನು ಕಳುಹಿಸಿ 1,400 ಭಾರತೀಯರನ್ನು ಕರೆತರಲಾಗಿದೆ. ಭಾರತೀಯ ರಾಯಭಾರಿಯ ಆದೇಶ ಬರುತ್ತಿದ್ದಂತೆ ಸುಮಾರು 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ತಿಳಿಸಿದರು. 

 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವ ನಿತಿನ್‌ ಗಡ್ಕರಿಯಿಂದ ರಾಜ್ಯದಲ್ಲಿ 19,930 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ