Select Your Language

Notifications

webdunia
webdunia
webdunia
webdunia

ಭಾರತ-ಶ್ರೀಲಂಕಾ ಟಿ20: ಟೀಂ ಇಂಡಿಯಾಕ್ಕೆ ದಾಖಲೆಯ ಗೆಲುವು

ಭಾರತ-ಶ್ರೀಲಂಕಾ ಟಿ20: ಟೀಂ ಇಂಡಿಯಾಕ್ಕೆ ದಾಖಲೆಯ ಗೆಲುವು
ಧರ್ಮಶಾಲಾ , ಸೋಮವಾರ, 28 ಫೆಬ್ರವರಿ 2022 (08:20 IST)
ಧರ್ಮಶಾಲಾ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇದರ ಜೊತೆಗೆ ಹೊಸ ದಾಖಲೆಯನ್ನೂ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ 5 ರನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಆಘಾತ ನೀಡಿದರು. ಆರಂಭಿಕರಾಗಿ ಬಡ್ತಿ ಪಡೆದು ಬಂದ ಸಂಜು ಸ್ಯಾಮ್ಸನ್ 18 ರನ್ ಗೆ ಇನಿಂಗ್ಸ್ ಕೊನೆಗೊಳಿಸಿದರು. ಆದರೆ ಮತ್ತೆ ಆಪತ್ ಬಾಂಧವರಾದ ಶ್ರೇಯಸ್ ಅಯ್ಯರ್ 45 ಎಸೆತಗಳಿಂದ ಅಜೇಯ 73 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ರವೀಂದ್ರ ಜಡೇಜಾ ಅಜೇಯ 22 ರನ್ ಗಳಿಸಿದರು.

ಇದರೊಂದಿಗೆ ಟೀಂ ಇಂಡಿಯಾ ವಿಂಡೀಸ್ ಬಳಿಕ  ಲಂಕಾ ಟಿ20 ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಅಲ್ಲದೆ,  ಸತತವಾಗಿ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಗೆಲುವು ಕಂಡ ದಾಖಲೆಯನ್ನೂ ಮಾಡಿತು. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಕ್ರಿಕೆಟಿಗರ ಬಸ್ ನಲ್ಲಿ ಸಜೀವ ಗುಂಡುಗಳು ಪತ್ತೆ: ಅಲರ್ಟ್ ಆದ ಪೊಲೀಸರು