Select Your Language

Notifications

webdunia
webdunia
webdunia
webdunia

ಉಕ್ರೇನ್‍ನಿಂದ ದೆಹಲಿಗೆ ಬಂದ ಭಾರತೀಯರು

ಉಕ್ರೇನ್‍ನಿಂದ ದೆಹಲಿಗೆ ಬಂದ  ಭಾರತೀಯರು
ನವದೆಹಲಿ , ಭಾನುವಾರ, 27 ಫೆಬ್ರವರಿ 2022 (12:26 IST)
ನವದೆಹಲಿ : ಉಕ್ರೇನ್ನಲ್ಲಿ ಸಿಲುಕಿದ್ದ 250 ಭಾರತೀಯ ಪ್ರಜೆಗಳನ್ನು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ ಏರ್ ಇಂಡಿಯಾದ ಎರಡನೇ ವಿಮಾನವು ಭಾನುವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಏರ್ ಇಂಡಿಯಾ (ಎಐ)-192 ವಿಶೇಷ ವಿಮಾನವು ಬೆಳಗ್ಗೆ 3 ಗಂಟೆಗೆ ‘ಆಪರೇಷನ್ ಗಂಗಾ’ ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿದೆ. 

ಈ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ಉಕ್ರೇನ್ನಿಂದ ಬುಚಾರೆಸ್ಟ್ ಮೂಲಕ ಸುರಕ್ಷಿತವಾಗಿ ಬಂದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಈ ವಿಮಾನದಲ್ಲಿ ಬಂದ ಭಾರತೀಯ ವಿದ್ಯಾರ್ಥಿಯೊಬ್ಬರು ಮಾಧ್ಯಮದೊಂದಿಗೆ ಮಾತನಾಡಿ, ಕೈವ್ನ ಹಲವಾರು ಸ್ಥಳಗಳಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ನಾಗರಿಕರು ತಮ್ಮ ದೇಶವನ್ನು ಉಳಿಸಲು ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯ ಬೆಂಬಲ ಕೋರಿದ ಉಕ್ರೇನ್