Publish Date: Fri, 02 Oct 2020 (12:02 IST)
Updated Date: Fri, 02 Oct 2020 (12:05 IST)
ಪತ್ನಿಯೊಬ್ಬಳು ಅನೈತಿಕ ಸಂಬಂಧ ಹೊಂದಿದವನು ನೀಡುತ್ತಿದ್ದ ಸುಖದಲ್ಲಿ ತೇಲಾಡಿ ಗಂಡನಿಗೆ ಮಾಡಬಾರದ್ದನ್ನು ಮಾಡಿದ್ದಾಳೆ.
ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಸೇರಿಕೊಂಡ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆ ಮಾಡಿದ್ದಾಳೆ.
ಲಕ್ಷ್ಮಣ ಲಮಾಣಿ ಕೊಲೆಯಾದ ವ್ಯಕ್ತಿಯಾಗಿದ್ದು, ಗದಗ ತಾಲೂಕಿನ ಕಬಲಾಯತಕಟ್ಟಿ ತಾಂಡಾ ನಿವಾಸಿಯಾಗಿದ್ದಾನೆ.
ಈತನ ಪತ್ನಿ ಲಲಿತಾಗೆ ಸೋಮಪ್ಪ ಲಮಾಣಿ ಎಂಬುವನ ಜೊತೆ ಅನೈತಿಕ ಸಂಬಂಧ ಇತ್ತು. ಮೂರ್ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧದಲ್ಲೇ ಸುಖ ಹೊಂದುತ್ತಿದ್ದರು.
ಗಂಡ ಮಲಗಿದ್ದ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮುಳುಗಂದ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧನ ಮಾಡಿದ್ದಾರೆ.