Publish Date: Tue, 07 Jan 2020 (17:57 IST)
Updated Date: Tue, 07 Jan 2020 (17:58 IST)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಹಾಗೂ ಬಿಎಂಟಿಸಿ ಸಿಬ್ಬಂದಿಗೆ ಸಚಿವರೊಬ್ಬರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಾರ್ಮಿಕ ಸಂಘಟನೆಗಳು ಕರೆ ನೀಡಿರೋ ಬಂದ್ ನಲ್ಲಿ ಸಾರಿಗೆ ಸಂಸ್ಥೆಯ ಕಾರ್ಮಿಕರು ಪಾಲ್ಗೊಳ್ಳಲೇಬಾರದು. ಹೀಗಂತ ಡಿಸಿಎಂ ಲಕ್ಷ್ಮಣ ಸವದಿ ವಾರ್ನಿಂಗ್ ನೀಡಿದ್ದಾರೆ.
ಬಂದ್ ಹೆಸರಿನಲ್ಲಿ ಗಲಾಟೆ, ಗಲಭೆಗಳು ಆದರೆ ಅಂಥವರ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.
ಬಂದ್ ನಿಂದಾಗಿ ಬಸ್ ವ್ಯವಸ್ಥೆ ಮೇಲೆ ಪರಿಣಾಮ ಬೀರೋದಿಲ್ಲ.
ಆದೇಶ ಉಲ್ಲಂಘನೆ ಮಾಡಿ ಬಂದ್ ನಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳೋದು ಫಿಕ್ಸ್ ಅಂತ ಡಿಸಿಎಂ ಹೇಳಿದ್ದಾರೆ.