Select Your Language

Notifications

webdunia
webdunia
webdunia
webdunia

ಡಿಸಿಎಂ ಹುದ್ದೆ ವಿರೋಧಿಸಿ ಸಹಿ ಸಂಗ್ರಹಿಸುವ ಆರೋಪಕ್ಕೆ ರೇಣುಕಾಚಾರ್ಯ ಹೇಳಿದ್ದೇನು?

ಡಿಸಿಎಂ ಹುದ್ದೆ ವಿರೋಧಿಸಿ ಸಹಿ ಸಂಗ್ರಹಿಸುವ ಆರೋಪಕ್ಕೆ ರೇಣುಕಾಚಾರ್ಯ ಹೇಳಿದ್ದೇನು?
ತುಮಕೂರು , ಗುರುವಾರ, 2 ಜನವರಿ 2020 (07:11 IST)
ತುಮಕೂರು : ಡಿಸಿಎಂ ಹುದ್ದೆ ವಿರೋಧಿಸಿ ಶಾಸಕ ರೇಣುಕಾಚಾರ್ಯ ಸಹಿ ಸಂಗ್ರಹಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.



ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಹಿ ಸಂಗ್ರಹಿಸುತ್ತಿದ್ದೇನೆ ಎನ್ನುವುದು ಸುಳ್ಳು. ಅಲ್ಲದೆ ಸಿಎಂ ಅದಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವ ವದಂತಿಯೂ ಸುಳ್ಳು. ನಾನು ಸಹಿ ಸಂಗ್ರಹ ಮಾಡಿದ್ದೇನೆ ಎಂದು ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ. ಡಿಸಿಎಂ ಸ್ಥಾನದ ಬಗ್ಗೆ ಹೇಳಿಕೆ ಕೊಟ್ಟಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.


ಅಲ್ಲದೇ ಈ ಬಗ್ಗೆ ಕೆಲವರು ಸುಳ್ಳು ಆರೋಪ ಮಾಡಿದ್ದಾರೆ. ಡಿಸಿಎಂ ಹುದ್ದೆ ಬೇಡ ಎಂಬ ವಿಚಾರಕ್ಕೆ ಅನೇಕ ಶಾಸಕರು, ಪರಿಷತ್ ಸದಸ್ಯರು, ಮುಖಂಡರು ಬೆಂಬ ಸೂಚಿಸಿದ್ದಾರೆ. ಈ ವಿಚಾರವನ್ನು ನಾನು ಎಲ್ಲಿ ತಲುಪಿಸಬೇಕೋ ಅಲ್ಲಿ ತಲುಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿಯ ತಾಯಿ ಮದುವೆಗೆ ಒಪ್ಪದಿದ್ದದಕ್ಕೆ ಪ್ರಿಯತಮ ಮಾಡಿದ್ದೇನು ಗೊತ್ತಾ?