Publish Date: Tue, 31 Dec 2019 (16:23 IST)
Updated Date: Tue, 31 Dec 2019 (16:25 IST)
ಡಿಸಿಎಂ ಬೇಡವೇ ಬೇಡ ಎಂಬ ಚರ್ಚೆ ಪ್ರಬಲವಾಗಿ ಕೇಳಿಬರುತ್ತಿರುವ ನಡುವೆಯೇ ಡಿಸಿಎಂ ಒಬ್ಬರು ಫುಲ್ ಗರಂ ಆಗಿದ್ದಾರೆ.
ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಮಾತ್ರ ಡಿಸಿಎಂ ಬೇಡ ಅಂತ ಯಾರೋ ಮಾತನಾಡುತ್ತಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ.
ಹೀಗಂತ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಡಿಸಿಎಂ ಹುದ್ದೆಗಳನ್ನು ರದ್ದು ಮಾಡುವಂತೆ ನಡೆಸುತ್ತಿರುವ ಹುನ್ನಾರಕ್ಕೆ ಹಾಗೂ ಮುಖಂಡರಿಗೆ ಟಾಂಗ್ ನೀಡಿದ ಕಾರಜೋಳ, ಪಕ್ಷದ ನಾಯಕರು ಈ ಕುರಿತು ಚರ್ಚೆ ಮಾಡೇ ಇಲ್ಲ ಅಂತ ತಿರುಗೇಟು ನೀಡಿದ್ದಾರೆ.