Publish Date: Tue, 31 Dec 2019 (14:34 IST)
Updated Date: Tue, 31 Dec 2019 (14:36 IST)
ಕ್ರಿಕೆಟ್ ಆಡೋ ಸಂದರ್ಭದಲ್ಲಿ ನಡೆದ ಘಟನೆಗೆ ಇದೀಗ 12 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ಕ್ರಿಕೆಟ್ ಆಡೋವಾಗ ಐದಾರು ವರ್ಷದ ಹಿಂದೆ ಕೊಲೆ ಪ್ರಕರಣ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿರೋ ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಸ್ಪೇಷನ್ ಕೋರ್ಟ್ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.
ಅಷ್ಟೇ ಅಲ್ಲ, 6.65 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.
ಹುಬ್ಬಳ್ಳಿಯ ನಿವಾಸಿಗಳಾದ ಸಿದ್ಧಾರೂಡ ಶಿರಕೋಳ, ಕಲ್ಲಪ್ಪ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಮಂಜುನಾಥ್ ಉಪ್ಪಾರ, ಅಯ್ಯಪ್ಪ ಲಕ್ಕುಂಡಿ, ಶ್ರೀಪಾದ ಪೂಜಾರಿ, ವಿಶಾಲ್ ಜಾಧವ್, ಮಂಜುನಾಥ್ ಗೋಕಾಕ್, ಅಜಯ್ ಗುತ್ತಲ, ಸಂತೋಷ್ ಸುನಾಯಿ, ಅನಿಲ್ ಸಾವಂತ ಅಪರಾಧಿಗಳಾಗಿದ್ದಾರೆ.