Select Your Language

Notifications

webdunia
webdunia
webdunia
Wednesday, 9 April 2025
webdunia

ಬಿಬಿಎಂಪಿ ಅಧಿಕಾರಿ ಹಾಗೂ ನೌಕರರಿಂದ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ

Indefinite strik
bangalore , ಮಂಗಳವಾರ, 7 ಸೆಪ್ಟಂಬರ್ 2021 (19:18 IST)
ಬಿಬಿಎಂಪಿ ಅಧಿಕಾರಿ ಹಾಗೂ ನೌಕರರಿಂದ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರೆಯುತ್ತದೆ.ವೃಂದ ಮತ್ತು ನೇಮಕಾತಿ ಹಲವು ಬೇಡಿಕೆ ಆಧರಿಸಿ ಧರಣಿ ನಡೆಸಿದ್ರು .ಅಷ್ಟೇ ಅಲ್ಲದೇ ಪಾಲಿಕೆಯ ಸೇವೆಗಳಲ್ಲಿ ವ್ಯತ್ಯಯವಾಗಿದೆ.ವೃಂದ ಮತ್ತು ನೇಮಕಾತಿ ನಿಯಾಮಾಳಿಗಳನ್ವಯ 5219 ಹುದ್ದೆಗಳಿಗೆ ಮಂಜೂರು ವಿಚಾರವಾಗಿ ಕರ್ತವ್ಯ ಬಹಿಷ್ಕರಿಸಿ ಮುಷ್ಕರವನ್ನ  ಪಾಲಿಕೆ ಮುಂಭಾಗ ನೌಕರರು ಮಾಡಿದ್ರು.
 
ಕೇಂದ್ರ ಕಚೇರಿ ಸೇರಿ 198 ವಾರ್ಡ್ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ರು.ಮೂವರ ಕೆಲಸ ಒಬ್ಬ ನೌಕರನ‌ ಮೇಲೆ ಬಿದ್ದಿದೆ.ನೇಮಕಾತಿ ಸಂಬಂಧ ಹಲವು ಬಾರಿ ಪ್ರಸ್ತಾವನೆ ಹೋಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ.ಈಗಲಾದ್ರೂ 5219 ಹುದ್ದೆಗಳಿಗೆ ಮಂಜೂರು ಮಾಡಬೇಕು.ಕೋವಿಡ್ ಮೃತ ಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕು.ನಗರ ಯೊಜನೆ ವಿಭಾಗದಲ್ಲಿ 39 ಹುದ್ದೆ ಸೃಷ್ಟಿಸಿ ವಿರೋಧಿಸಿ ಮುಷ್ಕರ‌ ಮಾಡಿದ್ರು.
 
ಹಂತ‌ ಹಂತವಾಗಿ ಹೋರಾಟದ ಕಾವು ಹೆಚ್ಚಿಸಲು ಪ್ಲ್ಯಾನ್ ಮಾಡಿದ್ದು, ಇಂದು ಕರ್ತವ್ಯಕ್ಕೆ ಹಾಜರಾಗದೇ ಧರಣಿ ನಡೆಸಿದ್ರು.ನಾಳೆಯಿಂದ ವ್ಯಾಕ್ಸಿನೇಷನ್ ಕಾರ್ಯಕ್ರಮ‌ ನಿಲ್ಲಿಸಲು ನಿರ್ಧಾರ ಮಾಡಿದ್ದು ,ವ್ಯಾಕ್ಸಿನೇಷನ್‌ ಆರೋಗ್ಯ ಸಿಬ್ಬಂದಿಯಾದ್ರೂ ಬಿಬಿಎಂಪಿ ಆರೋಗ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಕೆಲಸ ಮಾಡುವುದು ಸೇರಿದಂತೆ ಮೂರನೆ ದಿನ ಕಸ ವಿಲೇವಾರಿ ನಿಲ್ಲಿಸಿ ಧರಣಿ ಮಾಡಲು ಲೆಕ್ಕಚಾರ ಮಾಡಿದ್ದಾರೆ.ಕಸ‌‌ ವಿಲೇವಾರಿ ಇಂಜಿನಿಯರ್ - ಹೆಲ್ತ್ ಇನ್ಸ್ ಪೆಕ್ಟರ್ ಮಾರ್ಗದರ್ಶನದಲ್ಲೇ ನಡೆಯಲಿದೆ.ಇಂದು ಇದೇ ವಿಷಯವಾಗಿ ಬಹುತೇಕ ಎಲ್ಲ ಪಾಲಿಕೆ‌ ಕಚೇರಿಗಳು ಕ್ಲೋಸ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅನಗತ್ಯ ಖರ್ಚು ವೆಚ್ಚ ನಿರ್ಬಂಧಿಸಲು ಯೋಚನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ