Publish Date: Sun, 18 Dec 2022 (11:03 IST)
Updated Date: Sun, 18 Dec 2022 (11:06 IST)
ಮಂಗಳೂರು : ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೋಷಕರು ಹಾಗೂ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಿಸೆಂಬರ್ 13 ರಂದು ಇಲ್ಲಿನ ಕರೆಕಾಡು ಪ್ರದೇಶದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೇ ಊರಿನವನಾಗಿದ್ದ ಯುವಕ ದಿನವೂ ಬಾಲಕಿಯನ್ನು ಬೈಕ್ನಲ್ಲಿ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ, ಅಲ್ಲದೇ ಬಾಲಕಿಗೆ ಕಿರುಕುಳ ನೀಡುತ್ತಿದ್ದ.
ಬಾಲಕಿಯಿಂದ ವಿಷಯ ತಿಳಿದ ಪೋಷಕರು ಮರುದಿನ ಹಿಂಬಾಲಿಸಿ, ಕಿರುಕುಳ ನೀಡುತ್ತಿದ್ದ ವೇಳೆ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರೂ ಇದಕ್ಕೆ ಸಾಥ್ ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.